×
Ad

ಟ್ವಿಟರ್‌ (ಎಕ್ಸ್) ಸರ್ವರ್‌ ಡೌನ್:‌ ಪ್ರೀಮಿಯಂ ಆವೃತ್ತಿಯಲ್ಲೂ ಎದುರಾದ ಸಮಸ್ಯೆ!

Update: 2023-12-21 12:21 IST

ಹೊಸದಿಲ್ಲಿ: ಗುರುವಾರ ಬೆಳಗ್ಗೆಯಿಂದ X (ಟ್ವಿಟರ್) ಸಾಮಾಜಿಕ ಮಾಧ್ಯಮ ಸಂಸ್ಥೆಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಟ್ವಿಟರ್‌ ಸರ್ವರ್ ಡೌನ್ ಆಗಿದೆ, ಬಳಕೆದಾರರಿಗೆ ಟ್ವೀಟ್‌ಗಳನ್ನು ತೋರಿಸುತ್ತಿಲ್ಲ ಎಂದು ವರದಿಯಾಗಿದೆ.

ಫಾಲೋವರ್ಸ್‌, ಫಾಲೋಯಿಂಗ್‌ ಸೇರಿದಂತೆ ಟ್ವೀಟ್‌ಗಳು ಕೂಡಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ಮತ್ತು ಅದರ ಪ್ರೀಮಿಯಂ ಆವೃತ್ತಿಯಾದ ಎಕ್ಸ್ ಪ್ರೊ ಎರಡೂ ಜಾಗತಿಕವಾಗಿ ತಾಂತ್ರಿಕ ದೋಷಗಳನ್ನು ಎದುರಿಸುತ್ತಿದೆ ಎಂದು ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ತಿಳಿಸಿದೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ 47,000 ಕ್ಕೂ ಹೆಚ್ಚು ಬಳಕೆದಾರರು ಎಕ್ಸ್ ಮತ್ತು ಎಕ್ಸ್ ಪ್ರೊ ಎರಡರಲ್ಲೂ ಸಮಸ್ಯೆಗಳನ್ನು ಅನುಭವಿಸಿದ್ದಾರೆ ಎಂದು ರಾಯ್ಟರ್ಸ್‌ ವರದಿ ಮಾಡಿದೆ.

ಸರ್ವರ್‌ ಡೌನ್‌ ಆದ ಕುರಿತು ಬಳಕೆದಾರರು ದೂರುತ್ತಿದ್ದಂತೆಯೇ, ಸಮಸ್ಯೆಯನ್ನು X ಸರಿಪಡಿಸಿಕೊಂಡಿದ್ದು, ಮತ್ತೆ ಯಥಾ ಸ್ಥಿತಿ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News