ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಬಾಕ್ಸರ್ ಗ್ಲಾಸ್ಗೊದಲ್ಲಿ ನಾಪತ್ತೆ
ಬಾಕ್ಸರ್ ಖುದ್ರತುಲ್ಲಾ | Photo Credit : x
ಗ್ಲಾಸ್ಗೊ, ಆ.4: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ 21 ಸದಸ್ಯರ ತಂಡವು ತನ್ನ ದೇಶಕ್ಕೆ ವಾಪಸಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ ಬಾಕ್ಸರ್ ಖುದ್ರತುಲ್ಲಾ ಅವರು ಗ್ಲಾಸ್ಗೊದಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಖುದ್ರತುಲ್ಲಾ ಅವರು ಬೆಳಗ್ಗಿನ ಜಾವ 2 ಗಂಟೆಗೆ ಅವರ ಹೊಟೇಲ್ ಕೋಣೆಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ನಂತರ ಅಧಿಕಾರಿಗಳು ಅವರ ಕೊಠಡಿಯನ್ನು ಪರಿಶೀಲಿಸಿದಾಗ ಅಲ್ಲಿ ಅವರು ಇರದೇ ಇರುವುದು ಗೊತ್ತಾಗಿದೆ. ಪಾಕಿಸ್ತಾನ ತಂಡವು ತಮ್ಮ ದೇಶಕ್ಕೆ ತೆರಳುವ ಮೊದಲು ಬೆಳಗ್ಗೆ 9ಕ್ಕೆ ಹೊಟೇಲ್‌ನಲ್ಲಿ ಒಟ್ಟಿಗೆ ಸೇರಿತ್ತು ಎಂದು ಪಾಕಿಸ್ತಾನದ ಮಾಧ್ಯಮ ಜಿಯೋ ನ್ಯೂಸ್ ವರದಿ ಮಾಡಿದೆ.
ಖುದ್ರತುಲ್ಲಾ ಅವರ ಪಾಸ್ ಪೋರ್ಟ್ ಹಾಗೂ ರಿಟರ್ನ್ ಟಿಕೆಟ್ ಈಗಲೂ ಟೀಮ್ ಮ್ಯಾನೇಜರ್ ಬಳಿಯೇ ಇದೆ.
ಕಳೆದ ವರ್ಷ ಇಟಲಿಯಲ್ಲಿ ಇಂಟರ್‌ನ್ಯಾಶನಲ್ ಟೂರ್ ವೇಳೆ ಪಾಕಿಸ್ತಾನದ ಇನ್ನೋರ್ವ ಬಾಕ್ಸರ್ ರೊಹೈಬ್ ನಾಪತ್ತೆಯಾಗಿದ್ದರು.