ಅಮೆರಿಕದ ಕ್ರಿಕೆಟಿಗ ಅಖಿಲೇಶ್ ರೆಡ್ಡಿಗೆ 8 ವರ್ಷ ನಿಷೇಧ ಹೇರಿದ ICC

Update: 2026-08-03 21:59 IST

Photo Credit: x/@thecrichub_live

ದುಬೈ: ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ)ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿರುವ ಆರೋಪದಲ್ಲಿ ಅಮೆರಿಕದ ಕ್ರಿಕೆಟ್ ಆಟಗಾರ ಬಿ.ಅಖಿಲೇಶ್ ರೆಡ್ಡಿ ಅವರನ್ನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಎಂಟು ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ.

ಯುಎಇನಲ್ಲಿ ನಡೆದಿದ್ದ 2025ರ ಆವೃತ್ತಿಯ ಅಬುಧಾಬಿ ಟಿ10 ಟೂರ್ನಮೆಂಟ್‌ನ ವೇಳೆ ಭ್ರಷ್ಟಾಚಾರಕ್ಕೆ ಸಂಬಂಧಿಸಿ 26ರ ವಯಸ್ಸಿನ ರೆಡ್ಡಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಪತ್ರಿಕಾ ಪ್ರಕಟನೆಯೊಂದರಲ್ಲಿ ಐಸಿಸಿ ತಿಳಿಸಿದೆ.

2025ರ ನವೆಂಬರ್ 21ರಂದು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ದಿನದಿಂದ ನಿಷೇಧ ಅನ್ವಯವಾಗಲಿದೆ.

ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಪರವಾಗಿ ಪಂದ್ಯಾವಳಿಯ ಭ್ರಷ್ಟಾಚಾರ ವಿರೋಧಿ ವಿಷಯಗಳನ್ನು ನೋಡಿಕೊಳ್ಳುತ್ತಿದ್ದ ಐಸಿಸಿ, ರೆಡ್ಡಿಯನ್ನು ಮೂರು ಆರೋಪಗಳಲ್ಲಿ ತಪ್ಪಿತಸ್ಥನೆಂದು ಘೋಷಿಸಿದೆ.

ರೆಡ್ಡಿ ಅಮೆರಿಕದ ಪರ ನಾಲ್ಕು ಟಿ-20 ಪಂದ್ಯಗಳನ್ನು ಆಡಿದ್ದಾರೆ. ಕೇವಲ ಒಂದು ವಿಕೆಟ್ ಪಡೆದಿದ್ದರು. ಮೂವರು ಸದಸ್ಯರನ್ನು ಒಳಗೊಂಡ ಐಸಿಸಿ ಭ್ರಷ್ಟಾಚಾರ ವಿರೋಧಿ ಟ್ರಿಬ್ಯುನಲ್ ರೆಡ್ಡಿಗೆ ನಿಷೇಧ ಹೇರಿ ತೀರ್ಪು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News