ಆಸ್ಟ್ರೇಲಿಯದ ಅಂಡರ್-19 ತಂಡಕ್ಕೆ ಭಾರತ ಮೂಲದ ನೀಲ್ ಪಟೇಲ್ ಸೇರ್ಪಡೆ

Update: 2026-08-03 22:40 IST

Photo Credit: PTI

ಮೆಲ್ಬರ್ನ್: ಭಾರತ ತಂಡದ ವಿರುದ್ಧ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಬಹು ಮಾದರಿಯ ಸರಣಿಗಾಗಿ ಕ್ರಿಕೆಟ್ ಆಸ್ಟ್ರೇಲಿಯವು ಭಾರತ ಮೂಲದ ಯುವ ಆಟಗಾರ ನೀಲ್ ಪಟೇಲ್‌ರನ್ನು ಅಂಡರ್-19 ತಂಡಕ್ಕೆ ಸೋಮವಾರ ಸೇರ್ಪಡೆಗೊಳಿಸಿದೆ.

ಸೆಪ್ಟಂಬರ್ 13ರಿಂದ ಕ್ರಮವಾಗಿ ರಾಜ್‌ಕೋಟ್ ಹಾಗೂ ಅಹ್ಮದಾಬಾದ್‌ನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಚತುರ್ದಿನ ಪಂದ್ಯಗಳಿಗಾಗಿ ಆಯ್ಕೆ ಮಾಡಲಾಗಿರುವ 16 ಸದಸ್ಯರ ಪೈಕಿ ನೀಲ್ ಒಬ್ಬರಾಗಿದ್ದಾರೆ.

ನ್ಯೂ ಸೌತ್ ವೇಲ್ಸ್‌ನ ಆರಂಭಿಕ ಬ್ಯಾಟರ್ ನೀಲ್ ಅವರು ಜೂನಿಯರ್ ಕ್ರಿಕೆಟ್ ಮಟ್ಟದಿಂದ ಮೇಲೆ ಬಂದಿದ್ದಾರೆ. 16ರ ವಯಸ್ಸಿನಲ್ಲಿ ನೀಲ್ ಅವರು ಕ್ಯಾಲೆಂಡರ್ ವರ್ಷದಲ್ಲಿ ಸಿಡ್ನಿ ಪ್ರೀಮಿಯರ್ ಕ್ರಿಕೆಟ್ ಫಸ್ಟ್ ಗ್ರೇಡ್‌ನಲ್ಲಿ 1,000ಕ್ಕೂ ಅಧಿಕ ರನ್ ಗಳಿಸಿದ ಯುವ ಆಟಗಾರನಾಗಿದ್ದಾರೆ.

ಹೊಸ ಚೆಂಡನ್ನು ಎದುರಿಸಿ ದೀರ್ಘ ಅವಧಿ ಕ್ರೀಸ್ ಆಕ್ರಮಿಸಿಕೊಳ್ಳಬಲ್ಲ ನೀಲ್ ಆಫ್ ಸ್ಪಿನ್‌ನಲ್ಲಿ ಬೌಲಿಂಗ್ ಕೂಡ ಮಾಡಬಲ್ಲರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News