ಪರ್ತ್, ನ. 13: ಮಹ್ಲಿ ಬಿಯರ್ಡ್ಮನ್ ಅವರ 6 ವಿಕೆಟ್ ಗಳು ಮತ್ತು ಮಿಚೆಲ್ ಮಾರ್ಷ್ ಅವರ 29 ಎಸೆತಗಳ ಅರ್ಧಶತಕದ ಬಲದಿಂದ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯವು ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್ ಗಳ ಭರ್ಜರಿ ಅಂತರದಿಂದ ಸೋಲಿಸಿದೆ.

ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ 21 ವರ್ಷದ ಬಿಯರ್ಡ್ಮನ್ 24 ರನ್ ಗಳನ್ನು ನೀಡಿ ಆರು ವಿಕೆಟ್ ಗಳನ್ನು ಉರುಳಿಸಿದರು.

ಪರ್ತ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಇಂಗ್ಲೆಂಡ್ ಕೇವಲ 33.4 ಓವರ್ಗಳಲ್ಲಿ 131 ರನ್ ಗಳಿಗೆ ಆಲೌಟ್ ಆಯಿತು.

ಆರಂಭಿಕ ಟಾಮ್ ಬ್ಯಾಂಟನ್ 25, ಜೋ ರೂಟ್ 17 ಮತ್ತು ವಿಲ್ ಜಾಕ್ಸ್ 25 ರನ್ ಗಳನ್ನು ಗಳಿಸಿದರು.

ಆಸ್ಟ್ರೇಲಿಯ ಪರವಾಗಿ ಬಿಯರ್ಡ್ಮನ್ ಅವರನ್ನು ಹೊರತುಪಡಿಸಿ ಸ್ಪೆನ್ಸರ್ ಜಾನ್ಸನ್ 3 ವಿಕೆಟ್ ಗಳನ್ನು ಪಡೆದರು.

ಬಳಿಕ, ಗೆಲುವಿಗೆ ಅಲ್ಪಮೊತ್ತದ ಗುರಿಯನ್ನು ಪಡೆದ ಆಸ್ಟ್ರೇಲಿಯ ಕೇವಲ 23.3 ಓವರ್ಗಳಲ್ಲಿ ಗುರಿ ತಲುಪಿತು. ಅದು ಕೇವಲ ಮೂರು ವಿಕೆಟ್ ಗಳ ನಷ್ಟಕ್ಕೆ 132 ರನ್ ಗಳನ್ನು ಗಳಿಸಿತು.

ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್ಗಳೊಂದಿಗೆ ಸ್ಫೋಟಕ ಅರ್ಧಶತಕ ಬಾರಿಸಿದ ಮಾರ್ಷ್, ಪಂದ್ಯವನ್ನು ಏಕಪಕ್ಷೀಯವಾಗಿ ಗೆಲ್ಲಿಸಿಕೊಟ್ಟರು.

ಕೂಪರ್ ಕಾನಲಿ 27 ರನ್ ಗಳ ಕೊಡುಗೆ ನೀಡಿದರೆ, ಜೋಶ್ ಇಂಗ್ಲಿಸ್ (23) ಮತ್ತು ಮ್ಯಾಟ್ ರೆನ್ಶಾ (26) ಆಸ್ಟ್ರೇಲಿಯವನ್ನು ಗೆಲುವಿನ ದಡ ಸೇರಿಸಿದರು.

►ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ (33.4 ಓವರ್ಗಳಲ್ಲಿ) 131-10

ಟಾಮ್ ಬ್ಯಾಂಟನ್ 25, ವಿಲ್ ಜಾಕ್ಸ್ 25, ಗಸ್ ಆ್ಯಟ್ಕಿನ್ಸನ್ (ಔಟಾಗದೆ) 29

ಸ್ಪೆನ್ಸರ್ ಜಾನ್ಸನ್ 3-42, ಮಹ್ಲಿ ಬಿಯರ್ಡ್ಮನ್ 6-24

ಆಸ್ಟ್ರೇಲಿಯ (23.3 ಓವರ್ಗಳಲ್ಲಿ) 132-3

ಮಿಚೆಲ್ ಮಾರ್ಷ್ 50, ಕೂಪರ್ ಕಾನಲಿ 27, ಮ್ಯಾಟ್ ರೆನ್ಶಾ (ಔಟಾಗದೆ) 26

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor