Photo Credit : X/@BFI_official

ಡಕರ್ (ಸೆನೆಗಲ್): ಡಕರ್ 2026 ಯುವ ಒಲಿಂಪಿಕ್ ಗೇಮ್ಸ್‌ನಲ್ಲಿ, ಪುರುಷರ ಬಾಕ್ಸಿಂಗ್ 50 ಕೆಜಿ ವಿಭಾಗದಲ್ಲಿ ಭಾರತದ ಲೈರೆನ್‌ಲಕ್‌ಪಮ್ ಅಂಬೇಕರ್ ಮೈತೇಯಿ ಗುರುವಾರ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಸೆನೆಗಲ್‌ನ ಡಕರ್ ನಗರದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ, ಅವರು ಫೈನಲ್‌ನಲ್ಲಿ ಐರ್‌ಲ್ಯಾಂಡ್‌ನ ಕ್ರಿಸ್ಟಿಯನ್ ಜುಬಾನಿ ಅವರನ್ನು 3-2 ಅಂಕಗಳಿಂದ ಮಣಿಸಿದರು.

ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಮೂವರು ತೀರ್ಪುಗಾರರು ಅಂಬೇಕರ್ ಪರವಾಗಿ ತೀರ್ಪು ನೀಡಿದರೆ, ಉಳಿದ ಇಬ್ಬರು ಐರಿಶ್ ಎದುರಾಳಿಯ ಪರ ತೀರ್ಪು ನೀಡಿದರು.

ಈ ಚಿನ್ನದ ಪದಕವು ಮಣಿಪುರದ ಬಾಕ್ಸರ್‌ನ ಅದ್ಭುತ ಪ್ರದರ್ಶನಕ್ಕೆ ಕಿರೀಟಪ್ರಾಯವಾಯಿತು.

ಇದಕ್ಕೂ ಮುನ್ನ, ಅಂಬೇಕರ್ ಸೆಮಿಫೈನಲ್‌ನಲ್ಲಿ ಕೊಲಂಬಿಯದ ಇಜೋನ್ ಜೆಫ್ರಿ ಗೇಲಿಯಾ ಅರೆವಾಲೊ ಅವರನ್ನು 5-0 ಅಂತರದಿಂದ ಮಣಿಸಿದ್ದರು. ಈ ಮೂಲಕ, ಭಾರತ 16 ವರ್ಷಗಳ ಬಳಿಕ ಯುವ ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಫೈನಲ್ ತಲುಪಿತು.

ಇದಕ್ಕೂ ಮೊದಲು, 2010ರಲ್ಲಿ ಸಿಂಗಾಪುರದಲ್ಲಿ ನಡೆದ ಚೊಚ್ಚಲ ಯುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಶಿವ ಥಾಪಾ ಫೈನಲ್ ತಲುಪಿದ್ದರು.

ಅಂಬೇಕರ್ ಒಂದು ಹೆಜ್ಜೆ ಮುಂದೆ ಹೋಗಿ ಫೈನಲ್‌ನಲ್ಲಿ ಚಿನ್ನವನ್ನೂ ಗೆದ್ದರು ಹಾಗೂ ಆ ಮೂಲಕ ಪುರುಷರ 50 ಕೆಜಿ ವಿಭಾಗದಲ್ಲಿ ಭಾರತಕ್ಕೆ ಐತಿಹಾಸಿಕ ವಿಜಯವನ್ನು ತಂದುಕೊಟ್ಟರು.

ಈ ಯುವ ಬಾಕ್ಸರ್ ಪಟಿಯಾಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (ಎನ್‌ಐಎಸ್) ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor