×
Ad

FIFA 2026 | ಕೆನಡಾದ ಸ್ಟಾರ್ ಆಟಗಾರನ ಕಾಲು ಮುರಿತ; ಕತಾರ್ ಆಟಗಾರನಿಗೆ ಐದು ಪಂದ್ಯ ನಿಷೇಧ

Update: 2026-06-25 08:25 IST

Photo: x.com/dobioprer

ವ್ಯಾಂಕೋವರ್‌ : ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೆನಡಾದ ಮಿಡ್‌ಫೀಲ್ಡರ್ ಇಸ್ಮಾಯಿಲ್ ಕೋನ್ ಅವರ ಕಾಲು ಮುರಿಯಲು ಕಾರಣವಾಗುವ ರೀತಿಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕತಾರ್ ಫುಟ್ಬಾಲ್ ಆಟಗಾರ ಅಸೀಂ ಮದಿಬೊ ಅವರಿಗೆ ಐದು ಪಂದ್ಯಗಳ ನಿಷೇಧ ಹೇರಲಾಗಿದೆ.

ವ್ಯಾಂಕೋವರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕೆನಡಾ ತಂಡ ಕತಾರ್ ವಿರುದ್ಧ 6-0 ಗೋಲುಗಳ ಭರ್ಜರಿ ಜಯ ಸಾಧಿಸಿತು. ಆದರೆ, ಕೋನ್ ಅವರ ತೀವ್ರ ಗಾಯದಿಂದಾಗಿ ಈ ಐತಿಹಾಸಿಕ ವಿಜಯದ ಸಂಭ್ರಮಕ್ಕೆ ಅಡ್ಡಿಯಾಯಿತು. ಪಂದ್ಯದ 51ನೇ ನಿಮಿಷದಲ್ಲಿ ಮದಿಬೊ, ಕೋನ್ ಅವರನ್ನು ಹಿಂದಿನಿಂದ ನಿಭಾಯಿಸುವ ಪ್ರಯತ್ನದಲ್ಲಿ ಕೋನ್ ಬಿದ್ದು ಕಾಲು ಮುರಿದುಕೊಂಡರು. ಈ ಪ್ರಮಾದ ತಕ್ಷಣವೇ ಅಕ್ಕಪಕ್ಕ ಇದ್ದ ಆಟಗಾರರ ಗಮನಕ್ಕೆ ಬಂದಿದೆ. ಮೈದಾನದಲ್ಲಿ ಕಾಲು ಹಿಡಿದುಕೊಂಡು ನೋವಿನಿಂದ ಚೀರುತ್ತಾ ಕೋನ್ ಅನಾಮತ್ತಾಗಿ ಬಿದ್ದರು.

ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಧಾವಿಸಿ ಸ್ಟ್ರೆಚರ್‌ನಲ್ಲಿ ಗಾಯಾಳು ಆಟಗಾರನನ್ನು ಕರೆದೊಯ್ದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಕೆಳಗಾಲಿನ ಎರಡು ಮುಖ್ಯ ಎಲುಬುಗಳು ಮುರಿದಿದ್ದ ಕಾರಣ ತುರ್ತು ಶಸ್ತ್ರಚಿಕಿತ್ಸೆಗೆ ಗುರಿಪಡಿಸಲಾಗಿದೆ.

ಮದಿಬೊ ಅವರಿಗೆ ರೆಡ್‌ಕಾರ್ಡ್ ನೀಡಿ ಮೈದಾನದಿಂದ ಹೊರ ಕಳುಹಿಸಲಾಯಿತು. ಪಂದ್ಯದ ಬಳಿಕ ಕತಾರ್ ಆಟಗಾರ, ತಮ್ಮಿಂದ ಆದ ಪ್ರಮಾದಕ್ಕೆ ಕೋನ್ ಬಳಿ ತೆರಳಿ ಕ್ಷಮೆ ಯಾಚಿಸಿದರು.

ಫಿಫಾ ಶಿಸ್ತುಸಮಿತಿ ಘಟನೆಯ ಪರಾಮರ್ಶೆ ನಡೆಸಿ ಐದು ಪಂದ್ಯಗಳಿಗೆ ಮದಿಬೊ ಅವರನ್ನು ನಿಷೇಧಿಸಿತು. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕತಾರ್‌ಗೆ ಅವಕಾಶವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News