ಭಾರತ ತಂಡದ ವಿರುದ್ಧ T20 ಸರಣಿ; ಇಂಗ್ಲೆಂಡ್ ತಂಡ ಪ್ರಕಟ, ಜೇಮ್ಸ್ ಕೋಲ್ಸ್ ಗೆ ಅವಕಾಶ
ಜೇಮ್ಸ್ ಕೋಲ್ಸ್ | Photo Credit : X \ @SixerSanju
ಚೆನ್ನೈ, ಜೂ.23: ಭಾರತ ಕ್ರಿಕೆಟ್ ತಂಡದ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಗಾಗಿ ಇಂಗ್ಲೆಂಡ್ ತಂಡವು 17 ಸದಸ್ಯರ ಬಳಗವನ್ನು ಮಂಗಳವಾರ ಪ್ರಕಟಿಸಿದೆ. ಹೊಸ ಮುಖ, ಆಲ್‌ರೌಂಡರ್ ಜೇಮ್ಸ್ ಕೋಲ್ಸ್ ಇದೇ ಮೊದಲ ಬಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಹ್ಯಾರಿ ಬ್ರೂಕ್ ಇಂಗ್ಲೆಂಡ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. 2026ರ ಪುರುಷರ ಟಿ-20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ದ ಜೋರ್ಡನ್ ಕಾಕ್ಸ್, ಸೋನಿ ಬೇಕರ್ ಹಾಗೂ ಸಾಕಿಬ್ ಮಹ್ಮೂದ್ ತಂಡಕ್ಕೆ ವಾಪಸಾಗಲಿದ್ದಾರೆ. ಬ್ರೆಂಡನ್ ಕಾರ್ಸ್ ಹಾಗೂ ಜೇಮಿ ಓವರ್ಟನ್ ಗಾಯದಿಂದಾಗಿ ಅಲಭ್ಯರಾಗಿದ್ದಾರೆ.
ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಜೇಮ್ಸ್ ಕೋಲ್ಸ್, ಜೋರ್ಡನ್ ಕಾಕ್ಸ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ವಿಲ್ ಜಾಕ್ಸ್, ಸಾಕಿಬ್ ಮಹ್ಮೂದ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ಲ್ಯೂಕ್ ವುಡ್.