×
Ad

FIFA 2026 |‌ ಉಸ್ಮಾನ್ ಡೆಂಬೆಲೆ ಹ್ಯಾಟ್ರಿಕ್ ಗೋಲು: ನಾರ್ವೆ ವಿರುದ್ಧ ಫ್ರಾನ್ಸ್‌ಗೆ 4-1 ಅಂತರದ ಗೆಲುವು

Update: 2026-06-27 12:05 IST

Photo: x.com/France24_en

ಬೋಸ್ಟನ್: ನಾರ್ವೆ ವಿರುದ್ಧ 4-1 ಗೋಲುಗಳ ಜಯದೊಂದಿಗೆ ಫ್ರಾನ್ಸ್ ಐ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಉಭಯ ತಂಡಗಳೂ ನಾಕೌಟ್‌ ಪ್ರವೇಶಿಸಿರುವುದರಿಂದ ಈ ಪಂದ್ಯವು ಔಪಚಾರಿಕವಾಗಿ ಕೇವಲ ಅಗ್ರಸ್ಥಾನದ ಪೈಪೋಟಿಗಾಗಿ ನಡೆದಂತಿತ್ತು. ನಾರ್ವೆ ತಂಡವು ಪಂದ್ಯದಲ್ಲಿ 10 ಬದಲಾವಣೆಗಳನ್ನು ಮಾಡಿ ಭಾರಿ ಆಘಾತವನ್ನು ಅನುಭವಿಸಿತು.

ಮೊದಲಾರ್ಧದಲ್ಲಿ ಫ್ರಾನ್ಸ್ ತಂಡದ ಉಸ್ಮಾನೆ ಡೆಂಬೆಲೆ ನಾರ್ವೆ ತಂಡದ ಮೇಲೆ ಅಕ್ಷರಶಃ ಮುಗಿಬಿದ್ದಂತಿತ್ತು. ಕೇವಲ ಅರ್ಧ ಗಂಟೆಯಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿ ಫ್ರಾನ್ಸ್‌ನ ಭಾರಿ ಮುನ್ನಡೆಗೆ ಕಾರಣರಾದರು. ಈ ಹಂತದಲ್ಲಿ ಎರಡನೇ ಗೋಲು ಬಳಿಕ ನಾರ್ವೆ ಪರ ಥೆಲೋ ಆಸ್ಗಾರ್ಡ್ ಒಂದು ಗೋಲು ಗಳಿಸಿ ಹಿನ್ನಡೆಯನ್ನು ಕಡಿಮೆ ಮಾಡಿದರು. ಆದರೆ ಇದರಿಂದ ದೊಡ್ಡ ಬದಲಾವಣೆ ಸಾಧ್ಯವಾಗಲಿಲ್ಲ.

ಕೊನೆಯ ಹಂತದಲ್ಲಿ ಫ್ರಾನ್ಸ್ ಪರ ಡೆಸಿರೆ ಡೌ ರವರು ಟೂರ್ನಿಯಲ್ಲಿ ತಮ್ಮ ಮೊದಲ ಗೋಲು ಗಳಿಸಿ ಅಂತರವನ್ನು 4-1ಕ್ಕೆ ಏರಿಸಿದರು.

ಪಂದ್ಯದಲ್ಲಿ ನಾರ್ವೆ ತಂಡವು 5 ನೇರ ಗುರಿಯೊಂದಿಗೆ 10 ಬಾರಿ ಗೋಲು ಪ್ರಯತ್ನ ನಡೆಸಿದರೆ, ಫ್ರಾನ್ಸ್ ತಂಡವು 9 ನೇರ ಗುರಿಯೊಂದಿಗೆ 18 ಬಾರಿ ಗೋಲು ಪ್ರಯತ್ನ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News