×
Ad

ಫಿಫಾ ವಿಶ್ವಕಪ್ | ಅತಿ ಹೆಚ್ಚು ಪಂದ್ಯಗಳನ್ನಾಡಿದ ಮೆಸ್ಸಿ

Update: 2026-06-17 21:57 IST

ಲಿಯೊನೆಲ್ ಮೆಸ್ಸಿ | Photo Credit : PTI 

ಕಾನ್ಸಾಸ್ ಸಿಟಿ, ಜೂ.7: ಲಿಯೊನೆಲ್ ಮೆಸ್ಸಿ ತನ್ನ ಯಶಸ್ವಿ ವೃತ್ತಿಬದುಕಿನಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ. ಅರ್ಜೆಂಟೀನದ ಸೂಪರ್‌ಸ್ಟಾರ್ ಪುರುಷರ ಫುಟ್ಬಾಲ್ ಇತಿಹಾಸದಲ್ಲಿ ಗರಿಷ್ಠ ಫಿಫಾ ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ.

ಅಲ್ಜೀರಿಯಾ ವಿರುದ್ಧ ಬುಧವಾರ ಅರ್ಜೆಂಟೀನ ತಂಡ ಆಡಿದ ತನ್ನ ಆರಂಭಿಕ ಪಂದ್ಯದ ವೇಳೆ ಮೆಸ್ಸಿ ಈ ಸಾಧನೆ ಮಾಡಿದರು. 27ನೇ ವಿಶ್ವಕಪ್ ಪಂದ್ಯವನ್ನಾಡಿದ ಮೆಸ್ಸಿ ಹ್ಯಾಟ್ರಿಕ್ ಗೋಲು ಗಳಿಸಿ ಇದನ್ನು ಮತ್ತಷ್ಟು ವಿಶೇಷವಾಗಿಸಿಕೊಂಡರು. ಮೆಸ್ಸಿ ಆರು ವಿವಿಧ ವಿಶ್ವಕಪ್ ಟೂರ್ನಿಗಳನ್ನು ಆಡಿದ ಮೊದಲ ಆಟಗಾರ ಎನಿಸಿಕೊಂಡರು.

ಮೆಸ್ಸಿ 2006ರಲ್ಲಿ ಮೊದಲ ವಿಶ್ವಕಪ್ ಆಡಿದ್ದರು. ಎರಡು ದಶಕಗಳಿಂದ ತನ್ನ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಜರ್ಮನ್ ಲೆಜೆಂಡ್ ಲೋಥರ್ ಮಥಾಯಸ್(25 ಪಂದ್ಯ)ಎರಡನೇ ಸ್ಥಾನದಲ್ಲಿದ್ದಾರೆ. ಅವರು 1982ರಿಂದ 1998ರ ತನಕ ವೆಸ್ಟ್ ಜರ್ಮನಿ ಹಾಗೂ ಜರ್ಮನಿಯನ್ನು ಪ್ರತಿನಿಧಿಸಿದ್ದರು. ಜರ್ಮನಿಯ ಇನ್ನೋರ್ವ ಸ್ಟಾರ್ ಆಟಗಾರ ಮಿರಾಸ್ಲೋವ್ ಕ್ಲೋಸ್ 24 ಪಂದ್ಯಗಳನ್ನು ಆಡಿ ಮೂರನೇ ಸ್ಥಾನದಲ್ಲಿದ್ದಾರೆ. ಕ್ಲೋಸ್ 2002 ಹಾಗೂ 2014ರ ನಡುವೆ ಜರ್ಮನಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇಟಲಿಯ ದಿಗ್ಗಜ ಮಾಲ್ಡೊನಿ(23 ಪಂದ್ಯಗಳು), ಪೋರ್ಚುಗಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ(22 ಪಂದ್ಯಗಳು)ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News