×
Ad

FIFA World Cup | ಚರ್ಚೆಗೆ ಗ್ರಾಸವಾದ ಇರಾನ್‌ನ ಮುಹಮ್ಮದ್ ಮೊಹೆಬಿ ಸಂಭ್ರಮಾಚರಣೆ

Update: 2026-06-17 00:01 IST

Photo Credit : X

ಲಾಸ್ ಏಂಜಲೀಸ್, ಜೂ.16: ಇರಾನ್ ತಂಡದ ಮಿಡ್ ಫೀಲ್ಡರ್ ಮುಹಮ್ಮದ್ ಮೊಹೆಬಿ ನ್ಯೂಝಿಲ್ಯಾಂಡ್ ವಿರುದ್ಧ ಫಿಫಾ ವಿಶ್ವಕಪ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ 2-2ರಿಂದ ಡ್ರಾ ಸಾಧಿಸಿದ ನಂತರ ಸಂಭ್ರಮಾಚರಣೆ ನಡೆಸಿದ ರೀತಿಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇರಾನ್ ತಂಡವು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಕಾರಣವಾಗಿದ್ದ ಮೊಹೆಬಿ 64ನೇ ನಿಮಿಷದಲ್ಲಿ ಗೋಲು ಗಳಿಸಿದ ನಂತರ ಸ್ಟ್ಯಾಂಡ್ಗಳತ್ತ ಓಡಿ ಬಂದೂಕು ಹಿಡಿದಂತೆ ಕೈ ಸನ್ನೆ ಮಾಡಿ ಸಂಭ್ರಮಾಚರಣೆ ನಡೆಸಿದರು. ಮೊಹೆಬಿಯ ಈ ವರ್ತನೆ ಆನ್ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಸನ್ನೆಯನ್ನು ಅನುಚಿತವೆಂದು ಕರೆದರು. ಘಟನೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಫುಟ್ಬಾಲ್ ಅಧಿಕಾರಿಗಳಿಗೆ ಆಗ್ರಹಿಸಿದರು.

ಇರಾನ್ ರಾಷ್ಟ್ರಗೀತೆಗೆ ಮಿಶ್ರ ಪ್ರತಿಕ್ರಿಯೆ: ಪಂದ್ಯ ಆರಂಭಕ್ಕೂ ಮೊದಲು ಇರಾನ್ ರಾಷ್ಟ್ರಗೀತೆ ನುಡಿಸಲಾಯಿತು. ಆಗ ವಿವಿಧ ವರ್ಗದ ಪ್ರೇಕ್ಷಕರಿಂದ ಹರ್ಷೋದ್ಗಾರಗಳು ಹಾಗೂ ಜೋರಾದ ಕೂಗಾಟಗಳು ಕೇಳಿಬಂದವು. ವಿಶ್ವದಲ್ಲಿ ಅತಿ ಹೆಚ್ಚು ಇರಾನಿನ ವಲಸೆ ಸಮುದಾಯ ಇರುವ ಲಾಸ್ ಏಂಜಲೀಸ್‌ನಲ್ಲಿ ಈ ಪಂದ್ಯ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News