ಜಸ್‌ಪ್ರಿತ್ ಬುಮ್ರಾ | Photo Credit :BCCI 

ಹೊಸದಿಲ್ಲಿ: ಸ್ಟಾರ್ ಬೌಲರ್ ಜಸ್‌ಪ್ರೀತ್ ಬುಮ್ರಾ ಸೆ.13ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ ತಂಡದ ವಿರುದ್ಧ ಸರಣಿಗೆ ಭಾರತದ ಟಿ-20 ತಂಡಕ್ಕೆ ವಾಪಸಾಗಿದ್ದಾರೆ.

ಮೂರು ಪಂದ್ಯಗಳ ಸರಣಿಗಾಗಿ ಭಾರತ ಈ ಮೊದಲು ಪ್ರಕಟಿಸಿದ್ದ ತಂಡದಲ್ಲಿ ಬುಮ್ರಾರನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ ಎಡ ಮೊಣಕಾಲಿನ ಗಾಯದಿಂದಾಗಿ ಇತ್ತೀಚೆಗೆ ಅಂತರ್‌ರಾಷ್ಟ್ರೀಯ ಪಂದ್ಯಗಳಿಂದ ವಂಚಿತರಾಗಿದ್ದ ಬುಮ್ರಾ ಅವರ ಲಭ್ಯತೆಯು ಫಿಟ್ನೆಸ್ ಅನ್ನು ಅವಲಂಭಿಸಿತ್ತು.

ಬುಮ್ರಾ ಜುಲೈನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಭಾರತದ ಪರ ಕೊನೆಯ ಪಂದ್ಯವನ್ನಾಡಿದ್ದರು. ಆನಂತರ ಮೊಣಕಾಲು ನೋವಿನಿಂದಾಗಿ ಶ್ರೀಲಂಕಾದಲ್ಲಿ ನಡೆದಿದ್ದ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು.

2026ರ ಏಶ್ಯನ್ ಗೇಮ್ಸ್ ಸಹಿತ ಬಿಡುವಿಲ್ಲದ ಸರಣಿಯನ್ನಾಡಲಿರುವ ಟೀಮ್ ಇಂಡಿಯಾಕ್ಕೆ ಬುಮ್ರಾ ಅವರ ಮರಳಿಕೆಯು ಹೊಸ ಹುಮ್ಮಸ್ಸು ತಂದಿದೆ. ಏಶ್ಯನ್ ಗೇಮ್ಸ್ ಜಪಾನ್‌ನಲ್ಲಿ ಸೆ.19ರಿಂದ ಅ.4ರ ತನಕ ನಡೆಯಲಿದೆ. ಸೆ.27ರಿಂದ ಅ.3ರ ತನಕ ವೆಸ್ಟ್‌ಇಂಡೀಸ್ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಅ.6ರಿಂದ ಐದು ಪಂದ್ಯಗಳ ಟಿ-20 ಸರಣಿಯನ್ನಾಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor