×
Ad

IPL 2026 | ಕನ್ನಡಿಗ ಮನೀಶ್ ಪಾಂಡೆ ಹಿಡಿದ ಕ್ಯಾಚ್ ಗೆ ಕೊಹ್ಲಿ ನಿಬ್ಬೆರಗು!; ವಿಡಿಯೋ ವೈರಲ್

Update: 2026-05-14 18:17 IST

 photo credit : X\ @IPL

ರಾಯ್ಪುರ: ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು‌ (RCB) ತಂಡಗಳ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ಹಿಡಿದ ಮೈನವಿರೇಳಿಸುವ ಕ್ಯಾಚನ್ನು ಕಂಡು ಸ್ವತಃ ವಿರಾಟ್ ಕೊಹ್ಲಿಯೇ ನಿಬ್ಬೆರಗಾದ ಘಟನೆ ನಡೆಯಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ಸವಾಲಿನ 192 ರನ್ ಪೇರಿಸಿತು. ಗೆಲುವಿನ ಗುರಿ ಬೆನ್ನಿತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ (ಅಜೇಯ 105) ಹಾಗೂ ದೇವದತ್ ಪಡಿಕ್ಕಲ್ (39) ಅವರ ಅಮೋಘ ಆಟದ ನೆರವಿನಿಂದ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ನಾಲ್ಕು ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿ ಗೆಲುವಿನ ಗುರಿ ದಾಟಿತು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನೀಡಿದ್ದ ಗೆಲುವಿನ ಗುರಿಯನ್ನು ಸುಲಭವಾಗಿ ಬೆನ್ನತ್ತಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ, ಒಂದು ಹಂತದಲ್ಲಿ ಮೂರು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತ್ತು. ಸುನೀಲ್ ನರೈನ್ ಎಸೆದ 15ನೇ ಓವರ್ ನ ಕೊನೆಯ ಬಾಲ್ ಅನ್ನು ಅಜಿಂಕ್ಯಾ ರಹಾನೆಗೆ ಕ್ಯಾಚಿತ್ತು ನಾಯಕ ರಜತ್ ಪಾಟೀದಾರ್ (11) ನಿರ್ಗಮಿಸಿದ ಬಳಿಕ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಕ್ರೀಸಿಗೆ ಆಗಮಿಸಿದರು.

ಕಾರ್ತಿಕ್ ತ್ಯಾಗಿ ಎಸೆದ 17ನೇ ಓವರ್ ನ 5ನೇ ಬಾಲನ್ನು ಟಿಮ್ ಡೇವಿಡ್ ಬೌಂಡರಿಗೆ ಅಟ್ಟಲು ಪ್ರಯತ್ನಿಸಿದರು. ಆದರೆ, ಬ್ಯಾಕ್ವರ್ಡ್ ಪಾಯಿಂಟ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕನ್ನಡಿಗ ಮನೀಶ್ ಪಾಂಡೆ ಮಿಂಚಿನ ವೇಗದಲ್ಲಿ ತಮ್ಮ ಎಡಭಾಗಕ್ಕೆ ಜಿಗಿದು ಅದ್ಭುತ ಕ್ಯಾಚ್ ಹಿಡಿದರು. ಅದನ್ನು ನೋಡುತ್ತಲೇ ಬೌಲರ್ ಕಾರ್ತಿಕ್ ತ್ಯಾಗಿ ರೋಮಾಂಚನದಿಂದ ತಮ್ಮ ಕೈಯನ್ನು ತಲೆಯ ಮೇಲೆ ಹೊತ್ತು ನಿಂತರು. ಆ ಕ್ಯಾಚನ್ನು ಕಂಡು ಸ್ವತಃ ವಿರಾಟ್ ಕೊಹ್ಲಿ ಕೂಡಾ ನಿಬ್ಬೆರಗಾದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News