×
Ad

FIFA 2026 |ಸೆಮಿಫೈನಲ್ ಪ್ರವೇಶಿಸಿದ ಸ್ಪೇನ್: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಲಮೈನ್ ಯಮಲ್ ರ ಮೂರು ವರ್ಷದ ಸಹೋದರನ ಸಂಭ್ರಮಾಚರಣೆ

Update: 2026-07-11 16:17 IST

ಲಮೈನ್ ಯಮಲ್ | Photo Credit : AP ,  NDTV 

ಕ್ಯಾಲಿಫೋರ್ನಿಯಾ: ಇಲ್ಲಿನ ಸೋಫಿ ಕ್ರೀಡಾಂಗಣದಲ್ಲಿ ನಡೆದ ಸ್ಪೇನ್ ಮತ್ತು ಬೆಲ್ಜಿಯಂ ತಂಡಗಳ ನಡುವಿನ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 2-1ರ ಅಂತರದಲ್ಲಿ ಮಣಿಸಿ ಸ್ಪೇನ್ ತಂಡ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಈ ವೇಳೆ ಇಡೀ ಜಗತ್ತಿನ ಗಮನ ಸ್ಪೇನ್ ತಂಡದ ಫಾರ್ವರ್ಡ್ ಆಟಗಾರ ಲಮೈನ್ ಯಮಲ್ ರ ಮೇಲೆ ನೆಟ್ಟಿತ್ತು. ಆದರೆ, ಅವರ ಮೂರೂವರೆ ವರ್ಷದ ಸಹೋದರ ಕೆಯ್ನೆಯ ಸಂಭ್ರಮಾಚರಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸೋಫಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟೆಲಿವಿಷನ್ ಕ್ಯಾಮೆರಾಗಳು ಪದೇ ಪದೇ ಸ್ಟ್ಯಾಂಡ್ ನಿಂದ ಪಂದ್ಯವನ್ನು ವೀಕ್ಷಿಸುತ್ತಿದ್ದ ಲಮೈನ್ ಯಮಲ್ ರ ಸಹೋದರ ಕೆಯ್ನೆಯತ್ತ ತಿರುಗಿದವು. ಆತನ ಸಂಭ್ರಮಾಚರಣೆ ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆತ ಇದೀಗ ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿಯಾಗಿ ರೂಪಾಂತರಗೊಂಡಿದ್ದಾನೆ.

ಈ ಟೂರ್ನಮೆಂಟ್ ನಲ್ಲಿ ಕೆಯ್ನೆ ಇದೇ ಪ್ರಥಮ ಬಾರಿಗೆ ವೈರಲ್ ಆಗುತ್ತಿರುವುದಲ್ಲ. ಸ್ಪೇನ್ ಮತ್ತು ಆಸ್ಟ್ರಿಯಾ ನಡುವೆ ನಡೆದ 32ನೇ ಸುತ್ತಿನ ಪಂದ್ಯದಲ್ಲೂ ಕೆಯ್ನೆಯ ಸಂಭ್ರಮಾಚರಣೆ ವೈರಲ್ ಆಗಿತ್ತು.

ಸೆಪ್ಟೆಂಬರ್ 2022ರಲ್ಲಿ ಜನಿಸಿದ ಕೆಯ್ನೆ, ಬಾರ್ಸಿಲೋನಾದ ಫಾರ್ವರ್ಡ್ ಆಟಗಾರ ಲಮೈನ್ ಯಮಲ್ ರ ಸ್ವಂತ ಸಹೋದರನಾಗಿದ್ದಾನೆ. ಇಬ್ಬರ ನಡುವೆ 15 ವರ್ಷಗಳಷ್ಟು ವಯೋಮಾನದ ಅಂತರವಿದ್ದರೂ, ಅವರಿಬ್ಬರ ನಡುವಿನ ಬಾಂಧವ್ಯ ಮಾತ್ರ ತುಂಬಾ ಗಟ್ಟಿಯಾಗಿದೆ.

ಸಾಧಾರಣ ಕುಟುಂಬದ ಹಿನ್ನೆಲೆಯ 18 ವರ್ಷದ ಲಮೈನ್ ಯಮಲ್, ತದನಂತರ ಜಾಗತಿಕ ಫುಟ್ ಬಾಲ್ ತಾರೆಯಾಗಿ ಬೆಳೆದು ನಿಂತಿದ್ದಾರೆ.

“ನಾನು ಅಡುಗೆ ಕೋಣೆ ಮತ್ತು ಮಲಗುವ ಕೋಣೆ ಒಂದರಲ್ಲೇ ಇದ್ದ ಅಪಾರ್ಟ್ ಮೆಂಟ್ ನಿಂದ ಬಂದವನು. ನಾನು ನನ್ನ ತಾಯಿ ಸಂತೋಷವಾಗಿರುವುದನ್ನು ನೋಡುತ್ತಿದ್ದೇನೆ. ನಾನು ಬಯಸಿದ ಬಾಲ್ಯವನ್ನು ನನ್ನ ಸಹೋದರ ಅನುಭವಿಸಲಿರುವುದನ್ನು ನಾನು ನೋಡುತ್ತಿದ್ದೇನೆ. ಅದರಿಂದ ನನಗೆ ತುಂಬಾ ಸಂತೋಷವಾಗಿದೆ” ಎಂದು ಲಮೈನ್ ಯಮಲ್ ಹಿಂದೊಮ್ಮೆ ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News