×
Ad

300 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಕಿರಿಯ ಆಟಗಾರ್ತಿ ಸ್ಮೃತಿ ಮಂಧಾನ

Update: 2026-07-10 21:37 IST

ಸ್ಮೃತಿ ಮಂಧಾನ | Photo Credit : PTI 

ಲಂಡನ್, ಜು.10: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮೃತಿ ಮಂಧಾನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮೊದಲ ಬಾರಿ ನಡೆದ ಮಹಿಳೆಯರ ಟೆಸ್ಟ್ ಪಂದ್ಯದಲ್ಲಿ 300ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು.

29ರ ವಯಸ್ಸಿನ ಮಂಧಾನ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆಗೈದ ಕಿರಿಯ ವಯಸ್ಸಿನ ಮಹಿಳಾ ಕ್ರಿಕೆಟರ್ ಆಗಿದ್ದಾರೆ. 300 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿದ 12ನೇ ಆಟಗಾರ್ತಿಯಾಗಿದ್ದಾರೆ.

ಟಾಸ್ ಜಯಿಸಿದ ಇಂಗ್ಲೆಂಡ್ ತಂಡದ ನಾಯಕಿ ನ್ಯಾಟ್ ಸೀವರ್ ಬ್ರಂಟ್ ಬೌಲಿಂಗ್ ಆಯ್ದುಕೊಂಡರು. ಭಾರತವು ಶ್ರೀಚರಣಿಗೆ ಟೆಸ್ಟ್ ಕ್ಯಾಪ್ ನೀಡಿತು. ಯಸ್ತಿಕಾ ಭಾಟಿಯಾ ಆಡುವ 11ರ ಬಳಗಕ್ಕೆ ವಾಪಸಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News