ರನ್ ಚೇಸಿಂಗ್ ನಲ್ಲಿ ಪಂಜಾಬ್ ಕಿಂಗ್ಸ್ ವಿಶ್ವದಾಖಲೆ

Update: 2024-04-27 04:05 GMT

Photo: NDtv

ಕೊಲ್ಕತ್ತಾ: ರನ್ ಗಳ ಹೊಳೆ ಹರಿದ ಪಂದ್ಯದಲ್ಲಿ ಅತಿಥೇಯ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಜಯ ಸಾಧಿಸಿದ ಪಂಜಾಬ್ ಕಿಂಗ್ಸ್ ತಂಡ ಶುಕ್ರವಾರ ರನ್ ಚೇಸಿಂಗ್ ನಲ್ಲಿ ಹೊಸ ದಾಖಲೆ ಬರೆದಿದೆ.

ಬೆಟ್ಟದಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಪಿಬಿಕೆಎಸ್ ಕೇವಲ 18.4 ಓವರ್ ಗಳಲ್ಲಿ ಗುರಿ ತಲುಪಿತು. ಇದಕ್ಕೂ ಮುನ್ನ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 261 ರನ್ ಕಲೆ ಹಾಕಿತ್ತು.

ಕಿಂಗ್ಸ್ ಪರವಾಗಿ ಜಾನಿ ಬ್ರೆಸ್ಟೊ ಕೇವಲ 48 ಎಸೆತಗಳಲ್ಲಿ ಅಜೇಯ 108 ರನ್ ಗಳಿಸಿ ಗೆಲುವಿನ ರೂವಾರಿ ಎನಿಸಿದರು. ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಫಿಲ್ ಸ್ಲಾಟ್ (37 ಎಸೆತಗಳಲ್ಲಿ 75) ಹಾಗೂ ಸುನೀಲ್ ನರೇನ್ (32 ಎಸೆತಗಳಲ್ಲಿ 72) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 138 ರನ್ ಗಳನ್ನು ಮೊದಲ ವಿಕೆಟ್ ಗಳಿಸಿ ಭರ್ಜರಿ ಮೊತ್ತ ಕಲೆ ಹಾಕಿತ್ತು.

ಆದರೆ ಪಿಕೆಬಿಎಸ್ ಅಂತಿಮವಾಗಿ ಎಂಟು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಇದು ವಿಶ್ವದಾಖಲೆಯ ರನ್ ಚೇಸಿಂಗ್ ಎನಿಸಿದೆ. ಇದಕ್ಕೂ ಮುನ್ನ 2023ರಲ್ಲಿ ಸೆಂಚೂರಿಯನ್ ಪಾರ್ಕ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ಇಂಡೀಸ್ ವಿರುದ್ಧ 259 ರನ್ ಗಳ ಗುರಿ ಸಾಧಿಸಿದ್ದು, ದಾಖಲೆಯಾಗಿತ್ತು.

ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ 224 ರನ್ ಗಳನ್ನು ಬೆನ್ನಟ್ಟಿ ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಗಳಿಸಿದ್ದು, ದಾಖಲೆಯ ರನ್ ಚೇಸಿಂಗ್ ಎನಿಸಿತ್ತು. ಕೆಕೆಆರ್ ವಿರುದ್ಧ ಕೊಲ್ಕತ್ತಾದಲ್ಲಿ ಈ ವರ್ಷ ಕೂಡಾ ರಾಜಸ್ಥಾನ ರಾಯಲ್ಸ್ 224 ರನ್ ಗಳನ್ನು ಬೆನ್ನಟ್ಟಿ ಜಯ ಸಾಧಿಸಿತ್ತು.

ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯೂ ಈ ಪಂದ್ಯದಲ್ಲಿ ನಿರ್ಮಾಣವಾಯಿತು. ಬ್ಯಾಟರ್ ಗಳು 42 ಸಿಕ್ಸರ್ ಗಳನ್ನು ಸಿಡಿಸಿದ್ದು, ಈ ಹಿಂದಿನ ದಾಖಲೆ 38 ಸಿಕ್ಸರ್ ಆಗಿತ್ತು.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News