ರೊನಾಲ್ಡಿನೊ | Photo Credit : AP 

ರೋಮ್: ಬ್ರೆಝಿಲ್‌ನ ವಿಶ್ವಕಪ್ ವಿಜೇತ ಅಟಗಾರ ರೊನಾಲ್ಡಿನೊ 11 ವರ್ಷಗಳ ನಂತರ ಮೊದಲ ಬಾರಿ ತನ್ನ 46ನೇ ವಯಸ್ಸಿನಲ್ಲಿ ಸ್ಪರ್ಧಾತ್ಮಕ ಫುಟ್ಬಾಲ್‌ಗೆ ಮರಳಿದರು.

ಇಟಲಿಯ ರಾವೆನ್ನಾ ತಂಡದ ಪರ ಆಡಿದ ರೊನಾಲ್ಡಿನೊ ಅವರು ರವಿವಾರ ಫೋರ್ಲಿ ತಂಡದ ವಿರುದ್ಧ 2-0 ಅಂತರದಿಂದ ಗೆಲ್ಲುವಲ್ಲಿ ನೆರವಾದರು.

ರೊನಾಲ್ಡಿನೊ 10ನೇ ಕ್ರಮಾಂಕದ ಶರ್ಟ್ ಧರಿಸಿ ಮೊದಲಾರ್ಧ ಪೂರ್ತಿ ಆಡಿದರು.

ರೊನಾಲ್ಡಿನೊ 2015ರಲ್ಲಿ ಕೊನೆಯ ಬಾರಿ ವೃತ್ತಿಪರ ಪಂದ್ಯವನ್ನಾಡಿದ್ದರು. 2018ರಲ್ಲಿ ಅಧಿಕೃತವಾಗಿ ನಿವೃತ್ತಿಯಾಗಿದ್ದರು. 2002ರಲ್ಲಿ ವಿಶ್ವಕಪ್ ಗೆದ್ದಿರುವ ಬ್ರೆಝಿಲ್ ತಂಡದ ಸದಸ್ಯರಾಗಿದ್ದ ರೊನಾಲ್ಡಿನೊ 2005ರಲ್ಲಿ ಬ್ಯಾಲನ್ ಡಿ‘ ಓರ್ ಪ್ರಶಸ್ತಿಯನ್ನು ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸತೀಶ್ ಶೆಟ್ಟಿ , ವಾರ್ತಾಭಾರತಿ

contributor