ಟಿ-20 ಕ್ರಿಕೆಟ್| ನೂತನ ವಿಶ್ವ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ
ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ | Photo Credit : PTI
ವೆಲ್ಲಿಂಗ್ಟನ್: ಪುರುಷರ ಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಆರಂಭಿಕ ವಿಕೆಟ್ಗೆ 100ಕ್ಕೂ ಅಧಿಕ ಜೊತೆಯಾಟದ ವೇಳೆ ಗರಿಷ್ಠ ರನ್ ರೇಟ್ ದಾಖಲಿಸಿರುವ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ನೂತನ ವಿಶ್ವ ದಾಖಲೆ ನಿರ್ಮಿಸಿದರು.
ಭಾರತದ ಆರಂಭಿಕ ಆಟಗಾರರು ಪ್ರತಿ ಓವರ್ಗೆ 18.13 ರನ್ ಗಳಿಸಿದೆ. 2025ರಲ್ಲಿ ಓಲ್ಡ್ ಟ್ರಾಫೋರ್ಡ್ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಇಂಗ್ಲೆಂಡ್ನ ಜೋಸ್ ಬಟ್ಲರ್ ಹಾಗೂ ಫಿಲ್ ಸಾಲ್ಟ್ ನಿರ್ಮಿಸಿದ್ದ ಹಿಂದಿನ ದಾಖಲೆ(16.08)ಯನ್ನು ಮುರಿದರು.
ಅಭಿಷೇಕ್ 38 ಎಸೆತಗಳಲ್ಲಿ ಆಕರ್ಷಕ 113 ರನ್ ಹಾಗೂ 15ರ ಬಾಲಕ ಸೂರ್ಯವಂಶಿ 18 ಎಸೆತಗಳಲ್ಲಿ 45 ರನ್ ಗಳಿಸಿದ್ದಾರೆ.
ಅಭಿಷೇಕ್ ಹಾಗೂ ವೈಭವ್ ಮೊದಲ ವಿಕೆಟ್ನಲ್ಲಿ ಕೇವಲ ಏಳು ಓವರ್ಗಳಲ್ಲಿ 133 ರನ್ ಕಲೆ ಹಾಕಿದರು. ಪವರ್ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 118 ರನ್ ಕೂಡಿ ಹಾಕಿದರು. ಅಂತಿಮವಾಗಿ ಭಾರತವು 13.2 ಓವರ್ಗಳಲ್ಲಿ ಗೆಲುವಿನ ದಡ ಸೇರಿತು.