ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಡಾ.ಎಲ್.ಎನ್. ಮುಕುಂದ್ ರಾಜ್ ನೇಮಕ
Update: 2024-03-16 17:11 IST
ಡಾ.ಮುಕುಂದ್ ರಾಜ್
ಬೆಂಗಳೂರು: ರಾಜ್ಯ ಸರಕಾರವು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಡಾ.ಎಲ್.ಎನ್. ಮುಕುಂದ್ ರಾಜ್ ನೇಮಕವಾಗಿದ್ದರೆ, ಸದಸ್ಯರಾಗಿ ಸಿದ್ದಪ್ಪ ಹೊನಕಲ್, ಅರ್ಜುನ ಗೋಳಸಂಗಿ, ಡಾ. ಎಚ್.ಜಯಪ್ರಕಾಶ್ ಶೆಟ್ಟಿ, ಡಾ.ಚಂದ್ರಕಲಾ ಬಿದರಿ, ಡಾ. ಚಿಲಕ್ ರಾಗಿ, ಡಾ. ಗಣೇಶ್, ಸುಮಾ ಸತೀಶ್, ಎಚ್.ಆರ್ ಸುಜಾತ, ಅಕ್ಕೈ ಪದ್ಮಶಾಲಿ, ಪಿ.ಚಂದ್ರಿಕಾ, ಪ್ರಕಾಶ್ ರಾಜ್ ಮೇಹು, ಮಲ್ಲಿಕಾರ್ಜುನ ಮಾನ್ಪಡೆ, ಅಜಮೀರ್ ನಂದಾಪುರ, ಚಂದ್ರ ಕಿರಣ, ಮಹದೇವ ಬಸರಕೋಡ ಅವರು ನೇಮಕಗೊಂಡಿದ್ದಾರೆ.