ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರ ಮಾಧ್ಯಮ ಕಾರ್ಯದರ್ಶಿಯಾಗಿ ಪಿ.ತ್ಯಾಗರಾಜ್ ನೇಮಿಸಿ ಸರಕಾರ ಆದೇಶ
ಪಿ.ತ್ಯಾಗರಾಜ್
ಬೆಂಗಳೂರು : ರಾಜ್ಯ ಸರಕಾರವು ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಬುಧವಾರ (ಜುಲೈ 8)ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಗಾಯತ್ರಿ ಜಿ.ಎನ್.ಅವರು ಅಧಿಸೂಚನೆ ಪ್ರಕಟಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಕೆಳಗಿನವರನ್ನು ನೇಮಕ ಮಾಡಲಾಗಿದೆ.
ನೇಮಕಗೊಂಡವರು:
ಪಿ.ತ್ಯಾಗರಾಜ್ - ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾಧ್ಯಮ ಕಾರ್ಯದರ್ಶಿ - 1, ಆರ್.ಜಯಪ್ರಕಾಶ್ - ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ - 2, ರಾಘವೇಂದ್ರ ಭಟ್- ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ - 3 ಹುದ್ದೆಗೆ ಮೂವರು ಹಿರಿಯ ಪತ್ರಕರ್ತರನ್ನು ನೇಮಿಸಲಾಗಿದೆ.
ಆರ್.ಜಯಪ್ರಕಾಶ್/ರಾಘವೇಂದ್ರ ಭಟ್