ಬೆಂಗಳೂರು, ಅ. 19: ನಿಗಮ ಮಂಡಳಿ ನೇಮಕಾತಿ ಈ ತಿಂಗಳ ಅಂತ್ಯಕ್ಕೆ ಆಗುವ ಭರವಸೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೆಲವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಶೀಘ್ರದಲ್ಲೇ ಘೋಷಣೆ ಆಗಬೇಕು. ಇನ್ನು ಮರ್ನಾಲ್ಕು ದಿನದ ಬಳಿಕ ಚುನಾವಣಾ ನೀತಿ ಸಂಹಿತೆ ಮುಗಿಯಲಿದೆ ಎಂದು ಹೇಳಿದರು.

ಚುನಾವಣೆಗೂ ದಿಕ್ಸೂಚಿ: ಪರಿಷತ್ ಚುನಾವಣೆ ನಾಲ್ಕು ದಿನಗಳ ಕಾಲ ಪ್ರಚಾರ ಮಾಡಿ ಬಂದಿದ್ದೇನೆ. ಅಲ್ಲಿ ನಮಗೆ ಬಂದಂತಹ ವರದಿ ನೋಡಿದರೆ, ನಮ್ಮ ಪಕ್ಷದ ನಾಲ್ಕು ಅಭ್ಯರ್ಥಿಗಳು ಗೆಲ್ಲುವುದರಲ್ಲಿ ಯಾರಿಗೂ ಸಂಶಯ ಬೇಕಾಗಿಲ್ಲ ಎಂದು ಹರಿಪ್ರಸಾದ್ ಭರವಸೆ ವ್ಯಕ್ತಪಡಿಸಿದರು.

ರಾಜೀನಾಮೆ ಮೊದಲೇ ಹೇಳಿದ್ದರು: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರು ತಮ್ಮ ರಾಜೀನಾಮೆ ಬಗ್ಗೆ ಮೊದಲೇ ಹೇಳಿದ್ದರು. ಜಯನಗರ ಕ್ಷೇತ್ರದಲ್ಲಿ ಕೆಲಸ ಮಾಡಲಿಕ್ಕೆ ಸಮಯ ಸಿಗುತ್ತಿಲ್ಲ. ಹಾಗಾಗಿ ನಾನು ಆ ಪದವಿಗೆ ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದ್ದರು. ನೂತನ ಅಧ್ಯಕ್ಷರ ನೇಮಕ ಮಾಡುವ ಸಂಬಂಧ ಹುಡುಕಾಟ ನೆಡೆದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor