×
Ad

ಮೈಸೂರು-ಚೆನ್ನೈ ಕಾವೇರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಹಿಳೆ ಮೇಲೆ ದುಷ್ಕರ್ಮಿಯಿಂದ ಹಲ್ಲೆ, ದರೋಡೆಗೆ ಯತ್ನ: ಪ್ರಕರಣ ದಾಖಲು

Update: 2023-08-09 19:46 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.9: ಮೈಸೂರು-ಚೆನ್ನೈ ಕಾವೇರಿ ಎಕ್ಸ್‌ ಪ್ರೆಸ್ ರೈಲು ನಿಧಾನವಾಗಿ ಚಲಿಸುತ್ತಿದ್ದ ವೇಳೆ ನಗರದ ಕೆಂಗೇರಿ ಬಳಿ ಮಹಿಳಾ ಕಂಪಾರ್ಟ್‍ಮೆಂಟ್‍ಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ.

ಕೆಂಗೇರಿ ಬಳಿ ಆ.8ರ ರಾತ್ರಿ 10.40ರ ಸುಮಾರಿಗೆ ರೈಲಿನ ಕೋಚ್‍ಗೆ ನುಗ್ಗಿದ ದುಷ್ಕರ್ಮಿಯು ಗಾಯತ್ರಿ(43) ಎಂಬ ಮಹಿಳೆಯ ಬಳಿಯಿದ್ದ ಹಣ ಹಾಗೂ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ್ದು, ಪ್ರತಿರೋಧ ತೋರಿದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಹಲ್ಲೆಗೊಳಗಾದ ಮಹಿಳೆಯ ಪತಿ ಮಹೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಮೈಸೂರಿನ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News