KOPPALA | ಅಂಜನಾದ್ರಿಯ ದೇವಾಲಯದ ಗರ್ಭಗುಡಿಯಲ್ಲಿ ಸ್ವಾಮೀಜಿಗಳ ಹೊಡೆದಾಟ: ವಿಡಿಯೋ ವೈರಲ್
Update: 2025-12-24 13:33 IST
ಕೊಪ್ಪಳ: ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿಯ ದೇವಾಲಯದ ಗರ್ಭಗುಡಿಯಲ್ಲಿ ಸ್ವಾಮೀಜಿಗಳಿಬ್ಬರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು, ಹೊಡೆದಾಡಿರುವ ವೀಡಿಯೊ ಸಾಮಾಜಿಕ ಜಾಲತಾಣ ಹರಿದಾಡುತ್ತಿದೆ.
ಅಂಜನಾದ್ರಿಗೆ ಬಂದಿದ್ದ ಹಂಪಿಯ ಗೋವಿಂದನಾಂದ ಸರಸ್ವತಿ ಸ್ವಾಮೀಜಿ ಮತ್ತು ಅರ್ಚಕ ವಿದ್ಯಾದಾಸ ಬಾಬಾ ಸ್ವಾಮೀಜಿ ಮಧ್ಯೆ ಪೊಲೀಸರ ಸಮ್ಮುಖದಲ್ಲೇ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡ ಅವರಿಬ್ಬರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಸದ್ಯ ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು. ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಈ ಮಧ್ಯೆ ಹಂಪಿಯ ಗೋವಿಂದನಾಂದ ಸರಸ್ವತಿ ಸ್ವಾಮೀಜಿಯ ವಿರುದ್ಧ ಅರ್ಚಕ ವಿದ್ಯಾದಾಸ ಬಾಬಾ ಸ್ವಾಮೀಜಿಯವರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.