ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಆರೋಪದ ನಡುವೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಬಿ.ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋ‍ಷ್ಠಿ ನಡೆಸಿ ಮಾತನಾಡಿದ ಅವರು, ʼಸರಕಾರಕ್ಕೆ ಮತ್ತು ಪಕ್ಷಕ್ಕೆ ಯಾವುದೇ ರೀತಿಯ ಮುಜುಗರ ಉಂಟಾಗಬಾರದು ಎಂಬ ಉದ್ದೇಶದಿಂದ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದೇನೆʼ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಿಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, "ವಿಪಕ್ಷಗಳು ಮನುಸ್ಮೃತಿ ಜಾರಿಗೆ ಯತ್ನಿಸುತ್ತಿದ್ದಾರೆ. ಅವರು  ಸದನ ಹಾಳು ಮಾಡಿದ ಸಂವಿಧಾನದ ವಿರೋಧಿಗಳು. ವಿರೋಧ ಪಕ್ಷದಿಂದ ಕುತಂತ್ರ ರಾಜಕಾರಣ ನಡೀತಿದೆ. ಸದನದಲ್ಲಿ ನೋಟಿಸ್‌ ನೀಡಿ ಚರ್ಚೆ ಮಾಡಿ ಅಂತ ಹೇಳಿದ್ವಿ, ಆದರೆ ಅವರು ಚರ್ಚೆ ಮಾಡಲಿಲ್ಲ. ವಿನಾಃ ಕಾರಣ ಸದನ ನಡೆಯಲು ಬಿಡಲಿಲ್ಲ. ಇದರಿಂದ ಶಾಸಕರಿಗೆ ಯಾವುದೇ ತಮ್ಮ ಕ್ಷೇತ್ರದ ಬಗ್ಗೆ ಚರ್ಚೆ ಮಾಡೋಕೆ ಆಗಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಆಧಾರ ಇಲ್ಲದ ವಿಷಯ ಇಟ್ಟುಕೊಂಡು ದೊಡ್ಡದು ಮಾಡ್ತಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಎಸ್‌ಐಟಿ, ಸಿಐಡಿಯವರು ಸರಿಯಾಗಿ ತನಿಖೆ ಮಾಡಿದ್ದಾರೆ. ಆದರೆ ಮನುವಾದಿಗಳ ಕುತಂತ್ರದಿಂದ ನಾನು ಜೈಲಿಗೆ ಹೋದೆ ಎಂದು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor