KPSC ನೇಮಕಾತಿ ಅಕ್ರಮ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಜಾಮೀನು ಅರ್ಜಿ ವಜಾ
ಜ್ಞಾನೇಂದ್ರ ಕುಮಾರ್ ಗಂಗ್ವಾರ್
ಬೆಂಗಳೂರು: KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಇಂದು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಜಾಮೀನು ಅರ್ಜಿಯಯನ್ನು ವಜಾ ಮಾಡಿ 52 ನೇ ಸಿಸಿಹೆಚ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅದೇಶ ಮಾಡಿದೆ
ನ್ಯಾಯಾಂಗ ಬಂಧನದಲ್ಲಿರುವ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಜಾಮೀನು ಅರ್ಜಿಯ ವಿಚಾರಣೆಯನ್ನ ನಡೆಸಿದ್ದ ನ್ಯಾಯಾಲಯ ಇಂದು ಅದೇಶ ಹೊರಡಿಸಿದೆ.
ನ್ಯಾಯಾಲಯ ಹೇಳಿದ್ದು ಏನು?
KPSC ನೇಮಕಾತಿ ಅಕ್ರಮ ಸಂಬಂಧ ಸಿಐಡಿ ದೀರ್ಘ ವಿಚಾರಣೆ ನಡೆಸಿದೆ. ಸಿಐಡಿ ವಿಚಾರಣೆಯಲ್ಲಿ ಜ್ಞಾನೇಂದ್ರ ಕುಮಾರ್ ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾದ ಹಿನ್ನಲೆಯಲ್ಲಿ ಬಂಧನ ಮಾಡಿದೆ. ಈ ಪ್ರಕರಣವೂ ಈಗ ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿದೆ. ಸದ್ಯ ಪ್ರಕರಣದ ತನಿಖೆ ನಿರ್ಣಾಯಕ ಹಂತದಲ್ಲಿ ಇದೆ ಹಾಗೂ ಗಂಭೀರವಾದ ಆರೋಪಗಳು ಇದ್ದು ಈ ಹಂತದಲ್ಲಿ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿರುವುದಾಗಿ ತಿಳಿಸಿತು.
ಪಶುವೈದ್ಯಾಧಿಕಾರಿ ಹಾಗೂ ಕೆ ಎ ಎಸ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ನಂತರ ಪ್ರಕರಣದ ಗಂಭೀರತೆ ಅರಿತ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು. ನಂತರ ಜಾರಿ ನಿರ್ದೇಶನಾಲಯ (ಈಡಿ) ಕೂಡ ತನಿಖೆ ಆರಂಭಿಸಿತ್ತು
ವಿಚಾರಣೆಗೆ ಬಂದಿದ್ದ ಜ್ಞಾನೇಂದ್ರ ಕುಮಾರ್ ರನ್ನು ಸಿಐಡಿ ಬಂಧಿಸಿ ಹತ್ತು ದಿನಗಳ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿತ್ತು. ನಂತರ ಜೈಲಿನಲ್ಲೆ ಜ್ಞಾನೇಂದ್ರ ಕುಮಾರ್ ರನ್ನು ಈಡಿ ಕೂಡ ಬಂಧನ ಮಾಡಿ ಆರು ದಿನಗಳ ಕಸ್ಟಡಿಗೆ ಪಡೆದು ವಿಚಾರಣೆ ಮಾಡಿತ್ತು.
ಈಗ ಜ್ಞಾನೇಂದ್ರ ಕುಮಾರ್ ಅರ್ಜಿ ವಜಾಗೊಂಡಿರುವುದರಿಂದ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಬೇಕಿರುವುದರಿಂದ ಸೋಮವಾರ ಜ್ಞಾನೇಂದ್ರ ಕುಮಾರ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ