ರವಿ ಹಂಜ್, ವಿಶ್ವೇಶ್ವರ ಭಟ್

ಬೆಂಗಳೂರು : ಬಸವ ಮಂಟಪ ಕೃತಿ ವಿವಾದ ಸಂಬಂಧ ಲೇಖಕ ರವಿ ಹಂಜ್ ಹಾಗೂ ಪತ್ರಕರ್ತ ವಿಶ್ವೇಶ್ವರ ಭಟ್ ಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದೆ. 

ನಿನ್ನೆ ಅರ್ಜಿಯ ಅದೇಶವನ್ನು  56ನೇ ಸಿಸಿಎಚ್ ನ್ಯಾಯಾಲಯ ಕಾಯ್ದಿರಿಸಿತ್ತು. ಬಸವ ಮಂಟಪ ಕೃತಿ ವಿವಾದ ಸಂಬಂಧ ಎಫ್ ಐ ಆರ್ ದಾಖಲಾದ ಕಾರಣ ಬಂಧನ ಭೀತಿಯಲ್ಲಿದ್ದ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ 56 ಸಿಸಿಎಚ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ರವಿ ಹಂಜ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಾಡಿದ್ದರು. ಇತ್ತ ಸಂಪೂರ್ಣ ಎಫ್ ಐ ಆರ್ ರದ್ದು ಕೋರಿ ಹೈಕೋರ್ಟ್ ಗೂ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಇನ್ನಷ್ಟೆ ನಡೆಯಬೇಕಿದೆ.

ಇದರ ನಡುವೆ ಬೆಳಗಾವಿ ಮಾರ್ಕೆಟ್ ಠಾಣೆಯಲ್ಲಿ ರವಿ ಹಂಜ್ ವಿರುದ್ದ ಮತ್ತೊಂದು ಎಫ್ ಐ ಆರ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಇ-ಮೇಲ್ ಮೂಲಕ ನೊಟೀಸ್ ಜಾರಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾಗರಾಜ್ ಅಪ್ಪಸಂದ್ರ/ವಾರ್ತಾಭಾರತಿ

ಕ್ರೈಂ ಹಾಗೂ ಹೈಕೋರ್ಟ್ ವರದಿಗಾರರು

ನಾಗರಾಜ್ ಅಪ್ಪಸಂದ್ರ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ‘ವಾರ್ತಾಭಾರತಿ’ ಡಿಜಿಟಲ್ ನಲ್ಲಿ ಕ್ರೈಂ ಹಾಗೂ ಹೈಕೋರ್ಟ್ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.