×
Ad

ಬಿ.ಇಡಿ ಪ್ರವೇಶ ಪರೀಕ್ಷೆ: ಕಾಲೇಜುಗಳ ಆಯ್ಕೆಗೆ ಜ.17ರವರೆಗೆ ಅವಕಾಶ

Update: 2026-01-14 20:46 IST

ಸಾಂದರ್ಭಿಕ ಚಿತ್ರ | PC : gemini

ಬೆಂಗಳೂರು : 2025ನೇ ಸಾಲಿನ ಬಿ.ಇಡಿ. ದಾಖಲಾತಿ ಸಂಬಂಧ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು https://sts.karnataka.gov.in/GPSTRHK  ನಲ್ಲಿ ಪ್ರಕಟಿಸಲಾಗಿದ್ದು, ಕಾಲೇಜುಗಳ ಆಯ್ಕೆಗೆ ಜ.17ರವರೆಗೆ ಅವಕಾಶ ನೀಡಲಾಗಿದೆ. ಈ ಬಾರಿ ಕಲಾ ಅಭ್ಯರ್ಥಿಗಳು ವಿಜ್ಞಾನ ಸೀಟುಗಳಿಗೂ ಆಪ್ಷನ್ ಎಂಟ್ರಿ ಮಾಡಲು ಅವಕಾಶ ನೀಡಲಾಗಿದೆ.

ವಿಜ್ಞಾನ ವಿಷಯದಲ್ಲಿ ಖಾಲಿಯಿರುವ ಸೀಟುಗಳಿಗಿಂತ ವಿಜ್ಞಾನ ವಿಷಯದ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ವಿಜ್ಞಾನ ವಿಷಯದ ಅಭ್ಯರ್ಥಿಗಳಿಗೆ ಸೀಟುಗಳನ್ನು ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ವಿಜ್ಞಾನ ಸೀಟುಗಳನ್ನು ಕಲಾ ಸೀಟುಗಳಾಗಿ ಪರಿವರ್ತಿಸಿ ಕಲಾ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗುವುದು. ಆದುದರಿಂದ ಕಾಲೇಜಿನಲ್ಲಿ ಖಾಲಿಯಿರುವ ವಿಜ್ಞಾನ ಸೀಟುಗಳಿಗೂ ಕಲಾ ಅಭ್ಯರ್ಥಿಗಳು ಆಪ್ಷನ್ ಎಂಟ್ರಿ ಮಾಡಬಹುದಾಗಿದೆ.

ಜ.12ಪ್ರಕಟಿಸಿರುವ ಆಕ್ಷೇಪಿತ/ ತಿರಸ್ಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದಿದ್ದಲ್ಲಿ ಹಾಗೂ ಆಕ್ಷೇಪಣೆಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಅಂತಹ ಅಭ್ಯರ್ಥಿಗಳು ತಮ್ಮ ನೋಡಲ್ ಕೇಂದ್ರಗಳಿಗೆ ತೆರಳಿ ಮೂಲ ದಾಖಲೆಗಳ ಪರಿಶೀಲನೆಯನ್ನು ಜ.17ರೊಳಗೆ ಮಾಡಿಸಿಕೊಂಡು ಆಪ್ಷನ್ ಎಂಟ್ರಿ ಮಾಡಿಕೊಂಡಲ್ಲಿ ಮಾತ್ರ ಅಂಥವರನ್ನು ಮುಂದಿನ ಆಯ್ಕೆಪಟ್ಟಿಗೆ ಪರಿಗಣಿಸಲಾಗುವುದು.

ಅಂಥವರು ತಮ್ಮ ಮೂಲ ದಾಖಲೆಗಳನ್ನು ಸಂಬಂಧಿತ ನೋಡಲ್ ಕೇಂದ್ರಗಳಲ್ಲಿ ಪರಿಶೀಲನೆಗೊಳಪಡಿಸಿ, ಒದಗಿಸಲಾದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಹಿಂದಿನ ಆಯ್ಕೆಯನ್ನು ಅಳಿಸಿ ಹೊಸದಾಗಿ ಕಾಲೇಜು ಆಯ್ಕೆಯನ್ನು ಮಾಡಿಕೊಳ್ಳಬಹುದು ಎಂದು ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News