ಸಚಿವ ಸಂಪುಟ ವಿಸ್ತರಣೆ: ಮಂಕಾಳ ವೈದ್ಯ ಹೆಸರು ಕೈಬಿಟ್ಟ ಎಐಸಿಸಿ; ಎಸ್.ಎಸ್.ಮಲ್ಲಿಕಾರ್ಜುನ್ ಸೇರ್ಪಡೆ

Update: 2026-08-03 14:18 IST

ಮಂಕಾಳ ವೈದ್ಯ /ಎಸ್.ಎಸ್. ಮಲ್ಲಿಕಾರ್ಜುನ್

ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಬಿಡುಗಡೆ ಮಾಡಿದ ಅಧಿಕೃತ ಪಟ್ಟಿಯಲ್ಲಿ ಶಾಸಕ ಮಂಕಾಳ ವೈದ್ಯ ಅವರ ಹೆಸರನ್ನು ಕೈಬಿಡಲಾಗಿದ್ದು, ಅವರ ಬದಲಿಗೆ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರನ್ನು ಸೇರಿಸಲಾಗಿದೆ.

ಈ ಕುರಿತು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸ್ಪಷ್ಟನೆ ನೀಡಿದ್ದು, ಮಂಕಾಳ ವೈದ್ಯ ಅವರ ಹೆಸರು ಅಧಿಕೃತ ಪಟ್ಟಿಯಲ್ಲಿ ಎಂದಿಗೂ ಇರಲಿಲ್ಲ ಎಂದು ತಿಳಿಸಿದೆ. ಈ ಹಿಂದೆ ಪ್ರಕಟವಾಗಿದ್ದ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದ್ದು, ಅದು ಟೈಪಿಂಗ್ ದೋಷದಿಂದ ಸೇರ್ಪಡೆಯಾಗಿತ್ತು ಎಂದು ಹೇಳಿದೆ.

ಈ ಪಟ್ಟಿಯು ವ್ಯಾಪಕ ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಎಐಸಿಸಿ ಪರಿಷ್ಕೃತ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿದೆ.

ಸೋಮವಾರ ಸಂಪುಟ ಸೇರುವವರ ಪಟ್ಟಿ ಇಲ್ಲಿದೆ :

ಪಿ. ಎಂ. ನರೇಂದ್ರಸ್ವಾಮಿ

ಶಿವರಾಜ್ ತಂಗಡಗಿ

ರುದ್ರಪ್ಪ ಲಮಾಣಿ

ಕೆ. ಎಸ್. ಬಸವನ್ತಪ್ಪ

ಬಿ. ನಾಗೇಂದ್ರ

ಟಿ. ರಘುಮೂರ್ತಿ

ಬಿ. ಝಡ್. ಝಮೀರ್ ಅಹ್ಮದ್ ಖಾನ್

ರಿಜ್ವಾನ್ ಅರ್ಷದ್

ಸಂತೋಷ್ ಲಾಡ್

ಮಧು ಬಂಗಾರಪ್ಪ

ಪುಟ್ಟರಂಗಶೆಟ್ಟಿ

ಎಸ್.ಎಸ್. ಮಲ್ಲಿಕಾರ್ಜುನ್

ಡಾ. ಅಜಯ್ ಸಿಂಗ್

ಎನ್. ಚಲುವರಾಯಸ್ವಾಮಿ

ಕೆ. ಎಂ. ಶಿವಲಿಂಗೇಗೌಡ

ಎಚ್. ಸಿ. ಬಾಲಕೃಷ್ಣ

ಗಾಯತ್ರಿ ಶಾಂತೇಗೌಡ

ಬಸವರಾಜ ರಾಯರೆಡ್ಡಿ

ವಿಜಯಾನಂದ ಕಾಶಪ್ಪನವರ್

ಲಕ್ಷ್ಮಣ ಸವದಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News