×
Ad

ಸಿಇಟಿ ಫಲಿತಾಂಶ : ಪರೀಕ್ಷೆಯಲ್ಲಿ 2,75,677 ಮಂದಿ ಅರ್ಹತೆ

Update: 2025-05-24 17:54 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ವಿವಿಧ ವೃತ್ತಿಪರ ಪದವಿ ಕೋರ್ಸ್‍ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಫಲಿತಾಂಶವು ಶನಿವಾರದಂದು ಪ್ರಕಟವಾಗಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಭವೇಶ್ ಜಯಂತಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ.

ಪರೀಕ್ಷೆಯನ್ನು ಬರೆದ 3,11,991 ವಿದ್ಯಾರ್ಥಿಗಳ ಪೈಕಿ, 2,75,677 ಮಂದಿ ವಿವಿಧ ಕೋರ್ಸ್‍ಗಳ ಪ್ರವೇಶಾತಿ ಪಡೆಯಲು ಅರ್ಹರಾಗಿದ್ದಾರೆ. ಇಂಜಿನಿಯರ್ ಕೋರ್ಸ್‍ಗಳ ಪ್ರವೇಶಕ್ಕೆ 2,62,195 ಅಭ್ಯರ್ಥಿಗಳು, ಬ್ಯಾಚುಲರ್ ಆಫ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕೋರ್ಸ್‍ಗೆ 1,98,679 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.

2,14,588 ಮಂದಿ ಬಿಎಸ್ಸಿ. ಅಗ್ರಿಕಲ್ಚರ್, 2,18,282 ಮಂದಿ ಪಶುವೈದ್ಯಕೀಯ ವಿಜ್ಞಾನ ಕೋರ್ಸ್‍ಗೆ, 2,66,256 ಮಂದಿ ಬಿ.ಫಾರ್ಮಾಗೆ, 2,66,757 ಮಂದಿ ಫಾರ್ಮಾ-ಡಿ ಕೋರ್ಸ್‍ಗೆ ಹಾಗೂ 2,08,171 ಮಂದಿ ಬಿಎಸ್ಸಿ. ನರ್ಸಿಂಗ್ ಕೋರ್ಸ್‍ಗೆ ಪ್ರವೇಶಾತಿಯನ್ನು ಪಡೆದಿದ್ದಾರೆ.

ಎಂಜಿನಿಯರಿಂಗ್ ವಿಭಾಗ: ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಭವೇಶ್ ಜಯಂತಿ ಮೊದಲ ರ‍್ಯಾಂಕ್, ಬೆಂಗಳೂರಿನ ಸಾತ್ವಿಕ್ ಬಿ ಬಿರಾದರ್ ಎರಡನೇ ಹಾಗೂ ಬೆಂಗಳೂರಿನ ದಿನೇಶ್ ಗೋಮತಿ ಶಂಕರ್ ಅರುಣಾಚಲಂ ಮೂರನೇ ರ‍್ಯಾಂಕ್ ಗಳಿಸಿದ್ದಾರೆ. ಮಂಗಳೂರಿನ ಶಿಶಿರ್ ಎಚ್ ಶೆಟ್ಟಿ ನಾಲ್ಕನೇ ರ‍್ಯಾಂಕ್ ಮತ್ತು ಬೆಂಗಳೂರಿನ ದಿವ್ಯಾನ್ಶ್ ಅಗರ್ವಾಲ್ ಐದನೇ ರ‍್ಯಾಂಕ್ ಪಡೆದಿದ್ದಾರೆ.

ಪಶುವೈದ್ಯಕೀಯ ವಿಜ್ಞಾನ: ಪಶುವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಯಲಹಂಕದ ಹರೀಶ್ ರಾಜ್ ಮೊದಲನೇ, ಆತ್ರೇಯ ವೆಂಕಟಚಲಾಂ ಎರಡನೇ, ಮಂಗಳೂರಿನ ಸಾಫಲ್ ಎಸ್. ಶೆಟ್ಟಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ವಿಶ್ವಾರಾಧ್ಯ ರಮಣಗೌಡರ್ ನಾಲ್ಕನೇ ಹಾಗೂ ತೇಜಸ್ ಶೈಲೇಶ್ ಘೋಟ್ಗಾಲ್ಕರ್ ಐದನೇ ರ‍್ಯಾಂಕ್ ಪಡೆದಿದ್ದಾರೆ. ಮಂಗಳೂರಿನ ನೂತನ್ ಕೃಷ್ಣ ಭರವೇಶ್ ಡಿ. ಆರನೇ ರ‍್ಯಾಂಕ್ ಪಡೆದಿದ್ದಾರೆ.

ಪಶುವೈದ್ಯಕೀಯ ವಿಜ್ಞಾನ ಪ್ರಾಕ್ಟಿಕಲ್: ಪಶುವೈದ್ಯಕೀಯ ವಿಜ್ಞಾನ ಪ್ರಾಕ್ಟಿಕಲ್ ವಿಭಾಗದಲ್ಲಿ ರಕ್ಷಿತಾ. ವಿ.ಪಿ ಮೊದಲ ರ‍್ಯಾಂಕ್, ನಂದನ್ ಎರಡನೇ ರ‍್ಯಾಂಕ್, ಭುವನೇಶ್ವರಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ.

ನರ್ಸಿಂಗ್‌ : ನರ್ಸಿಂಗ್‌ ವಿಭಾಗದಲ್ಲಿ ಯಲಹಂಕದ ಹರೀಶ್ ರಾಜ್ ಮೊದಲನೇ, ಆತ್ರೇಯ ವೆಂಕಟಚಲಾಂ ಎರಡನೇ, ಮಂಗಳೂರಿನ ಸಾಫಲ್ ಎಸ್. ಶೆಟ್ಟಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ವಿಶ್ವಾರಾಧ್ಯ ರಮಣಗೌಡರ್ ನಾಲ್ಕನೇ ಹಾಗೂ ತೇಜಸ್ ಶೈಲೇಶ್ ಘೋಟ್ಗಾಲ್ಕರ್ ಐದನೇ ರ‍್ಯಾಂಕ್ ಪಡೆದಿದ್ದಾರೆ. ಮಂಗಳೂರಿನ ನೂತನ್ ಕೃಷ್ಣ ಭರವೇಶ್ ಡಿ. ಆರನೇ ರ‍್ಯಾಂಕ್ ಪಡೆದಿದ್ದಾರೆ.

ಬ್ಯಾಚುಲರ್ ಆಫ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್: ಬ್ಯಾಚುಲರ್ ಆಫ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ ಯಲಹಂಕದ ಹರೀಶ್ ರಾಜ್ ಮೊದಲನೇ, ಆತ್ರೇಯ ವೆಂಕಟಚಲಾಂ ಎರಡನೇ, ಮಂಗಳೂರಿನ ಸಾಫಲ್ ಎಸ್. ಶೆಟ್ಟಿ ಮೂರನೇ, ಮಂಗಳೂರಿನ ನೂತನ್ ಕೃಷ್ಣ ಭರವೇಶ್ ಡಿ. ನಾಲ್ಕೆನೇ ರ‍್ಯಾಂಕ್ ಪಡೆದಿದ್ದಾರೆ.

ಬಿಎಸ್ಸಿ. ಅಗ್ರಿಕಲ್ಚರ್: ಅಗ್ರಿಕಲ್ಚರ್ ವಿಭಾಗದಲ್ಲಿ ದಕ್ಷಿಣ ಕನ್ನಡದ ಅಕ್ಷಯ್ ಎಂ. ಹೆಗ್ಡೆ ಮೊದಲ ರ‍್ಯಾಂಕ್, ಮಂಗಳೂರಿನ ಸಾಯಿಶ್ ಶರವಣ ಪಂಡಿತ್ ಎರಡನೇ ರ‍್ಯಾಂಕ್ ಹಾಗೂ ಸುಚಿತ್.ಪಿ. ಪ್ರಸಾದ್ ಮೂರನೇ ರ‍್ಯಾಂಕ್ ಪಡೆದಿದ್ದಾರೆ.

ಬಿಎಸ್ಸಿ. ಅಗ್ರಿಕಲ್ಚರ್ ಪ್ರಾಕ್ಟಿಕಲ್: ಅಗ್ರಿಕಲ್ಚರ್ ಪ್ರಾಕ್ಟಿಕಲ್ ವಿಭಾಗದಲ್ಲಿ ತುಮಕೂರಿನ ಕೀರ್ತನಾ ಎಂ.ಎಲ್. ಮೊದಲ ರ‍್ಯಾಂಕ್, ರಕ್ಷಿತಾ ವಿ.ಪಿ. ಎರಡನೇ ರ‍್ಯಾಂಕ್, ಅಶ್ವಿನಿ ಯಕ್ಕುಂಡಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ.

ರ‍್ಯಾಂಕ್ ಪಟ್ಟಿಯಲ್ಲಿ ಬಾಲಕರೇ ಮುಂದು: ಬಿಎಸ್ಸಿ. ಅಗ್ರಿಕಲ್ಚರ್, ಪಶುವೈದ್ಯಕೀಯ ವಿಜ್ಞಾನ ಹೊರತುಪಡಿಸಿ ಉಳಿದ ಎಲ್ಲ ವಿಭಾಗಗಳ ಟಾಪ್ 10 ಪಟ್ಟಿಯಲ್ಲಿ ಬಾಲಕರೇ ಇದ್ದಾರೆ. ಹಾಗೆಯೇ ಹೆಚ್ಚಿನ ಅಭ್ಯರ್ಥಿಗಳು ಬೆಂಗಳೂರಿನವರೇ ಆಗಿದ್ದು, ಖಾಸಗಿ ಕಾಲೇಜುಗಳಲ್ಲಿ ಅಧ್ಯಯನ ಮಾಡಿದವರಾಗಿದ್ದಾರೆ.

ಈ ಬಾರಿ ಸಿಇಟಿ ಪರೀಕ್ಷೆಗೆ 3,30,787 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 3,11,991 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. 3,11,690 ಅಭ್ಯರ್ಥಿಗಳು ಭೌತಶಾಸ್ತ್ರ ಪತ್ರಿಕೆ, 3,11,767 ರಸಾಯನಶಾಸ್ತ್ರ, 3,04,170 ಗಣಿತ ಹಾಗೂ 2,39,459 ಅಭ್ಯರ್ಥಿಗಳು ಜೀವಶಾಸ್ತ್ರ ಪತ್ರಿಕೆಗೆ ಹಾಜರಿದ್ದರು.

ಭೌತಶಾಸ್ತ್ರ ಪತ್ರಿಕೆಯ ಒಂದು ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದ್ದು, ರಸಾಯನಶಾತ್ರದ ಎರಡು ಪ್ರಶ್ನೆಗಳಿಗೆ ಎರಡೆರಡು ಉತ್ತರಗಳು ಸರಿಯಾಗಿವೆ. ಜೀವಶಾಸ್ತ್ರ ಒಂದು ಪ್ರಶ್ನೆಗೆ ಎರಡು ಉತ್ತರ ಸರಿಯಾಗಿವೆ. ಇದೇ ಮೊದಲ ಬಾರಿಗೆ ಎಲ್ಲ ವಿದ್ಯಾರ್ಥಿಗಳ ಎಲ್ಲ ವಿಷಯಗಳ ಓಎಂಆರ್ ಶೀಟ್‍ಗಳನ್ನು(11,67,086 ಶೀಟ್) ಕೆಇಎ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ.

‘ಈ ಬಾರಿ ಅಂದಾಜು 10 ಸಾವಿರ ಅಭ್ಯರ್ಥಿಗಳು ತಮ್ಮ ನೋಂದಣಿ ಮತ್ತು ರೋಲ್ ನಂಬರ್‍ಗಳನ್ನು ತಪ್ಪಾಗಿ ದಾಖಲಿಸಿದ್ದರಿಂದ ಫಲಿತಾಂಶ ಕೊಡುವುದು ನಾಲ್ಕೈದು ದಿನ ತಡವಾಯಿತು. ನೀಟ್ ಫಲಿತಾಂಶ ಬಂದ ನಂತರ ಎಂಜಿನಿಯರಿಂಗ್ ಸೇರಿ ಇತರೆ ಕೋರ್ಸ್‍ಗಳ ಪ್ರವೇಶಕ್ಕೆ ಕೌನ್ಸಿಲಿಂಗ್ ನಡೆಸಲಗುವುದು’

-ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News