×
Ad

ಚಾಮರಾಜನಗರ: ತೀವ್ರವಾಗಿ ಗಾಯಗೊಂಡಿದ್ದ ಗಂಡು ಹುಲಿ ಸಾವು

Update: 2023-11-25 10:47 IST

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಂಡು ಹುಲಿಯೊಂದು ಶುಕ್ರವಾರ ಸಾವನ್ನಪ್ಪಿದೆ.

ಮದ್ದೂರು ಕಾಲೊನಿಯ ಅರಣ್ಯ ಡಿ ಲೈನ್ ಹತ್ತಿರ ರೈತ ದೊಡ್ಡ ಕರಿಯಯ್ಯ ಎಂಬವರ ಜಮೀನಿನ ಬಳಿ ತೀವ್ರ ನಿತ್ರಾಣದಿಂದ ಮಲಗಿದ್ದ ಹುಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು.

ವಿಷಯ ತಿಳಿದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ, ಪಶು ವೈದ್ಯ ಡಾ.ಮಿರ್ಜಾ ವಾಸೀಂ, ಆರ್ಎಫ್ಒ ಮಲ್ಲೇಶ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹುಲಿಯು ನಿಶ್ಯಕ್ತಿಯಿಂದ ನಿಲ್ಲಲಾರದ ಸ್ಥಿತಿಯಲ್ಲಿತ್ತು.

ಅತಿಯಾದ ಬಳಲಿಕೆಯಿಂದ ಸಂಜೆ ವೇಳೆಗೆ ಗಂಟೆಗೆ ಹುಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

‘ಗಂಡು ಹುಲಿಗೆ ಮೂರು ವರ್ಷ ವಯಸ್ಸಾಗಿರಬಹುದು. ದೇಹದ ಮೇಲೆ ಗಾಯದ ಗುರುತುಗಳಿದ್ದು, ವನ್ಯಪ್ರಾಣಿಗಳೊಂದಿಗಿನ ಕಾದಾಟದಲ್ಲಿ ಗಾಯಗೊಂಡಿದೆ’ ಎಂದು ಎಸಿಎಫ್ ರವೀಂದ್ರ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News