×
Ad

ಚಾಮರಾಜನಗರ: ಸಿಲಿಂಡರ್ ಸೋರಿಕೆಯಿಂದ ಲಾಡು ತಯಾರಿಕಾ ಘಟಕ ಬೆಂಕಿಗಾಹುತಿ

Update: 2023-12-01 15:48 IST

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಲಾಡು ತಯಾರಿಕಾ ಘಟಕದಲ್ಲಿ ಸಿಲಿಂಡರ್ ಅನಿಲ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡ ಘಟನೆ ಶುಕ್ರವಾರ ನಡೆದಿದೆ.

ಲಾಡು ತಯಾರಿಯಾ ಘಟಕದ ಹೊರಭಾಗದಲ್ಲಿ ಇರಿಸಲಾಗಿದ್ದ ಸಿಲಿಂಡರ್ ನಿಂದ ಅನಿಲ ಸೋರಿಕೆಯಿಂದಾಗಿ ಲಾಡು ತಯಾರಿಸಲು ಇರಿಸಲಾಗಿದ್ದ ಬಾಡಲಿಯ ಕಾವಿಗೆ ಬೆಂಕಿ ಹೊತ್ತಿಕೊಂಡು ಲಾಡು ಘಟಕದೊಳಗೆ ಬೆಂಕಿ ಆವರಿಸಿದೆ ಎನ್ನಲಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶೇಖರಿಸಿದ್ದ ಲಾಡು ಮತ್ತು ಹೊಸದಾಗಿ ತಯಾರಾಗುತ್ತಿದ್ದ ಲಾಡು ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ  ಕಾಣಿಕೆ ಹುಂಡಿಯ ಹಣ ಏಣಿಕೆ ಕಾರ್ಯದಲ್ಲಿ ತೊಡಗಿದ್ದ ಮಲೆ ಮಹದೇಶ್ವರ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News