×
Ad

ಚಾಮರಾಜನಗರ: ಪತ್ನಿಯನ್ನು ಮಾರಕಾಸ್ತ್ರದಿಂದ ಹೊಡೆದು ಹತ್ಯೆಗೈದ ಪತಿ

Update: 2023-10-22 15:38 IST

ಚಾಮರಾಜನಗರ: ಗೃಹಿಣಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ತಾಲೂಕಿನ ಮಂಗಲ ಹೊಸೂರು ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ತಮಿಳುನಾಡು ಮೂಲದ ರಾಧಿಕಾ ಎಂದು ಗುರುತಿಸಲಾಗಿದೆ.  ವ್ಯವಸಾಯ ಜಮೀನನನ್ನು ಗುತ್ತಿಗೆ ಪಡೆದು ಜೀವನ ಸಾಗಿಸುತ್ತಿದ್ದ ರಾಧಿಕ ಮತ್ತು ಕಾರ್ತಿಕ್  ದಂಪತಿಗಳ ನಡುವೆ ಹಣಕಾಸಿನ ವಿಚಾರವಾಗಿ ಶನಿವಾರ ರಾತ್ರಿ ಜಗಳ ಉಂಟಾಗಿದ್ದು,  ಕೋಪಗೊಂಡ ಕಾರ್ತಿಕ್ , ಮನೆಯಲ್ಲಿದ್ದ ಮಾರಕಾಸ್ತ್ರದಿಂದ ಪತ್ನಿ ರಾಧಿಕಾಳ ತಲೆಗೆ ಹೊಡೆದ ಪರಿಣಾಮ ಸ್ಥಳದಲ್ಲೇ ರಾಧಿಕ ಮೃತಪಟ್ಟಿದ್ದಾರೆ ಎಮದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತದ್ದಂತೆ ಡಿ.ವೈ.ಎಸ್.ಪಿ ಲಕ್ಷ್ಮಯ್ಯ, ಸಂತೇಮರಹಳ್ಳಿ ಇನ್ಸ್ ಪೆಕ್ಟರ್ ಬಸವರಾಜು, ಸಬ್ ಇನ್ಸ್ ಪೆಕ್ಟರ್ ತಾಜುದ್ದೀನ್ , ಹನುಮಂತ ಉಪ್ಪಾರ್ ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ಕಾರ್ತಿಕ್ ನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ರಾಧಿಕಾಳಿಗೆ 6 ತಿಂಗಳ ಮಗುವಿದೆ.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News