×
Ad

ಬೆಂಗಳೂರು: ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯ ವಿವರ ಇಲ್ಲಿದೆ...

Update: 2025-06-05 00:15 IST

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 13 ವರ್ಷದ ಬಾಲಕಿ ಸಹಿತ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸರಕಾರ ತಿಳಿಸಿದೆ.

ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯ ವಿವರ:

ಭೂಮಿಕ್(20), ಸಹನ(19), ಪೂರ್ಣಚಂದ್(32)‌, ಚಿನ್ಮಯಿ (19), ದಿವ್ಯಾಂಶಿ(13), ಚಿಂತಾಮಣಿ ನಿವಾಸಿ ಶ್ರವಣ್ (20), ಆಂಧ್ರಪ್ರದೇಶದ ನಿವಾಸಿ ದೇವಿ (29), ಕಣ್ಣೂರು ನಿವಾಸಿ ಶಿವಲಿಂಗ್‌ (17), ಮನೋಜ್‌ (33), ಮಂಗಳೂರು ನಿವಾಸಿ ಅಕ್ಷತಾ ಮೃತಪಟ್ಟವರು. ಮತ್ತೋರ್ವ 20 ವರ್ಷದ ವ್ಯಕ್ತಿಯ ಹೆಸರು ಪತ್ತೆಯಾಗಿಲ್ಲ ಎಂದು ಸರಕಾರ ತಿಳಿಸಿದೆ.

ಗಾಯಾಳುಗಳ ವಿವರ:

ದೀಪಕ್ ಕೆ.ಸಿ., ಸಂಪತ್ ಕುಮಾರ್ ಸಹಿತ 5 ಮಂದಿ ಮಣಿಪಾಲ್ (ವಿಕ್ರಂ ಆಸ್ಪತ್ರೆ)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸ್ಪರ್ಶ ಆಸ್ಪತ್ರೆಯಲ್ಲಿ 5 ಮಂದಿ, ವೈದೇಹಿ ಆಸ್ಪತ್ರೆಯಲ್ಲಿ 14 ಮಂದಿ, ಬೌರಿಂಗ್ ಆಸ್ಪತ್ರೆಯಲ್ಲಿ 18 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News