‘ಕನಿಷ್ಠ ವೇತನ ಪರಿಷ್ಕರಣೆ’ | ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚನೆ
Update: 2026-08-18 19:25 IST
ಬೆಂಗಳೂರು : ರಾಜ್ಯ ಸರಕಾರವು ಕನಿಷ್ಠ ವೇತನ ದರಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ವೇತನ ಸಂಹಿತೆ, 2019ರ ಅನುಸಾರವಾಗಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ವಿಶೇಷ ಸಂಯುಕ್ತ ಉಪಸಮಿತಿಯನ್ನು ರಚಿಸಿದೆ.
ಮಂಗಳವಾರ ಈ ಸಂಬಂಧ ಸಚಿವ ಸಂಪುಟದ ಸರಕಾರದ ಅಧೀನ ಕಾರ್ಯದರ್ಶಿ ಜೆ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದು. 2026ರ ಆಗಸ್ಟ್ 13ರಂದು ನಡೆದ ಸಭೆಯ ನಿರ್ಣಯದ ಆಧಾರದ ಮೇಲೆ, 2026ರ ಮೇ 22ರಂದು ಹೊರಡಿಸಲಾದ ಅಧಿಸೂಚನೆಯ ಅಂಶಗಳನ್ನು ಪರಿಶೀಲಿಸಲು ಈ ಉಪಸಮಿತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಸಮಿತಿ ಸದಸ್ಯರಾಗಿ ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ವಿಜಯಾನಂದ ಕಾಶಪ್ಪನವರ ಹಾಗೂ ಎಚ್.ಸಿ.ಬಾಲಕೃಷ್ಣ ಅವರು ಇದ್ದಾರೆ. ಕಾರ್ಮಿಕ ಇಲಾಖೆಯು ಉಪ ಸಮಿತಿಗೆ ಅಗತ್ಯ ನೆರವು ನೀಡಲಿದೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಿದ್ದಾರೆ.