ಹನೂರು ಶೂಟೌಟ್ ಪ್ರಕರಣ | ʼಜೀವ ಭಯ ಇದೆʼ : ಸಾಕ್ಷಿದಾರನಿಂದ ವೀಡಿಯೋ

Update: 2026-08-18 16:53 IST

ಚಾಮರಾಜನಗರ : ʼಶೂಟೌಟ್ ಪ್ರಕರಣದಲ್ಲಿ ತನ್ನನ್ನು ಪೊಲೀಸರು ಮತ್ತು ಅರಣ್ಯ ಇಲಾಖೆಯವರು ವಿಚಾರಣೆ ನೆಪದಲ್ಲಿ ಕರೆಸಿಕೊಂಡು ಏನಾದರೂ ಮಾಡಬಹುದಾಗಿದೆ. ತನ್ನ ಜೀವಕ್ಕೆ ತೊಂದರೆ ಇದೆʼ ಎಂದು ಪ್ರಕರಣದ ಸಾಕ್ಷಿದಾರ ವೀಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮರಿಯಮಂಗಲ ಬೀಟ್‌ನಲ್ಲಿ ಶನಿವಾರ ಮುಂಜಾನೆ ಅರಣ್ಯ ಸಿಬ್ಬಂದಿಗಳು ತಮ್ಮ ತಂಡದವರ ಮೇಲೆ ಶೂಟ್ ಮಾಡಿದರು. ಆಗ ನನಗೆ ಭಯವಾಗಿ ಕೆಳಗೆ ಉರುಳಿ ಬಿದ್ದೆ. ಐದು ನಿಮಿಷದ ಬಳಿಕ ನಿಶ್ಯಬ್ದವಾದ ಬಳಿಕ ನಾನು ಹೇಗೋ ತಪ್ಪಿಸಿಕೊಂಡು ಮನೆಗೆ ಬಂದೆ. ನಂತರ ಮೈಸೂರಿಗೆ ತೆರಳಿ ಆಸ್ಪತ್ರೆಗೆ ದಾಖಲಾದೆ ಎಂದು ಮಹಿಮಾದಾಸ್ ಹೇಳಿಕೊಂಡಿದ್ದಾರೆ.

ಪ್ರಸ್ತುತ ತನಗೆ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೇನೆ. ಇದೀಗ ಪೊಲೀಸರು ಅಥವಾ ಅರಣ್ಯ ಇಲಾಖೆಯವರು ಶೂಟೌಟ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ನನ್ನನ್ನು ವಿಚಾರಣೆಗೆ ಕರೆಯಿಸಿ ಏನಾದರೂ ಮಾಡಬಹದೆಂಬ ಭಯ ಕಾಡುತ್ತಿದೆ ಎಂದು ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News