ಪರ್ವೇಝ್ / ಈಶ್ವರ್ ಖಂಡ್ರೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರುವ ಕೆಆರ್ ಐಡಿಎಲ್ ಗದಗ ಉಪ ವಿಭಾಗದ ಎಇಇ ಪರ್ವೇಝ್ ಪತ್ತೆಗೆ ರಾಜ್ಯ ಸರಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಫರ್ವೇಝ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ಮಂಗಳವಾರ ಪರ್ವೇಝ್ ಅವರ ತಂದೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ಹೇಳಿದ ಅವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿಜಿಪಿಯವರೊಂದಿಗೆ ಕೂಡ ತಾವು ಮಾತನಾಡಿದ್ದು, ಪರ್ವೇಝ್ ಹುಡುಕಲು ಎಲ್ಲ ಕ್ರಮ ಕೈಗೊಳ್ಳುವಂತೆ ತಿಳಿಸಿರುವುದಾಗಿ ಹೇಳಿದರು.

ಸರಕಾರದಲ್ಲಿ ಹಣದ ಕೊರತೆ ಇಲ್ಲ. ಪರ್ವೇಝ್ ಹಣ ಪಾವತಿಗೆ ಸಂಬಂಧಿಸಿದಂತೆ ಆತಂಕ ಪಡುವ ಅಗತ್ಯವಿಲ್ಲ, ಪರ್ವೇಝ್ ನಿಮ್ಮನ್ನು ಸಂಪರ್ಕಿಸಿದರೆ, ಯಾವುದೇ ಸಮಸ್ಯೆ ಇದ್ದರೂ ಸರಕಾರ ಅದನ್ನು ಪರಿಹರಿಸುತ್ತದೆ ಎಂದು ತಿಳಿಸಿದೆ ಎಂಬ ಮಾಹಿತಿ ನೀಡಿ. ಮನೆಯವರಿಗೆಲ್ಲಾ ಧೈರ್ಯ ಹೇಳಿ ಎಂದರು.

ಈ ಪ್ರಕರಣದ ಬಗ್ಗೆ ತನಿಖೆ ಮಾಡಲೂ ಸೂಚಿಸಲಾಗಿದೆ. ಪರ್ವೇಝ್ ಅವರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor