×
Ad

ಶಾಸಕರು, ವರಿಷ್ಠರು ಸಿದ್ದರಾಮಯ್ಯ ಬೆಂಬಲಕ್ಕೆ ಇರುವಾಗ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ : ಎಚ್.ಸಿ.ಮಹದೇವಪ್ಪ

Update: 2024-08-25 21:37 IST

ಬೆಂಗಳೂರು : ಇಡೀ ಮಂತ್ರಿಮಂಡಲ, ಶಾಸಕರು, ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಕ್ಕೆ ಇರುವಾಗ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಭವನ ದುರ್ಬಳಕೆ ಮಾಡಿಕೊಳ್ಳುವ ಜೆಡಿಎಸ್, ಬಿಜೆಪಿ ಹುನ್ನಾರವು ಹೈಕಮಾಂಡ್‍ಗೆ ಅರ್ಥವಾಗಿದೆ. ಹೀಗಿರುವಾಗ ನಾಯಕತ್ವ ಬದಲಾವಣೆ ಪ್ರಶ್ನೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ರಾಜ್ಯಪಾಲರು 11 ವಿಧೇಯಕ ವಾಪಸ್ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಹಲವು ಮಹತ್ವದ ವಿಧೇಯಕಗಳು ವಾಪಸ್ ಬಂದಿವೆ.ಯಾವ ರಾಜ್ಯಪಾಲರೂ ಕೂಡ ಇಷ್ಟು ವಿಧೇಯಕ ಕಳುಹಿಸಿರಲಿಲ್ಲ ಎಂದ ಅವರು, ಪ್ರತಿಯೊಂದು ಸಮುದಾಯಕ್ಕೆ ಮುಖ್ಯಮಂತ್ರಿ ಅವಕಾಶ ಸಿಗಬೇಕು. ಆದರೆ ಅದಕ್ಕೆ ಕಾಲ ಬರಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News