ಬೆಂಗಳೂರು: ಬೆಂಗಳೂರಿನ ಹೊಸಕೆರೆಹಳ್ಳಿ ಟೋಲ್ ಬಳಿ ಇರುವ ಶೋಭಾ ಅಪಾರ್ಟ್ಮೆಂಟ್ ಯಾರದು? ಅದಕ್ಕೆ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುಟುಂಬ, ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಅವರಿಗೂ ಏನು ಸಂಬಂಧ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ತನ್ನ 'X' ಖಾತೆಯಲ್ಲಿ ಪೋಸ್ಟ್ ಹಾಕಿರುವ ಕುಮಾರಸ್ವಾಮಿ ಅವರು, ಶೋಭಾ ಅಪಾರ್ಟ್ಮೆಂಟ್ ಗೆ ಸಂಬಂಧಿಸಿ ಅಮಾಸೆಗೌಡ, ಭಾಗ್ಯಲಕ್ಷ್ಮಿ, ಕೆಂಪೇಗೌಡ ಅನ್ನುವವರು ಯಾರು? ಮುಖ್ಯಮಂತ್ರಿ ತಮ್ಮ ಮತ್ತು ತಾಯಿ ಹೆಸರಿಗೆ ಆ ಭೂಮಿಯನ್ನು ಖರಿಸಿದ್ದು ಹೇಗೆ? ಒಮ್ಮೆ ಸರ್ಕಾರಿ ಯೋಜನೆಗೆ ನೋಟಿಫೈ ಆಗಿರುವ ಭೂಮಿಯನ್ನು ಇವರು ಖರೀದಿಸಲು ಹೇಗೆ ಸಾಧ್ಯವಾಯಿತು? NOC ಹೇಗೆ ಸಿಕ್ಕಿತು? ಸರಣಿ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಹೊಸಕೆರೆಹಳ್ಳಿ ಟೋಲ್ ಬಳಿ ಕಟ್ಟಲಾಗಿರುವ ಗಗನಚುಂಬಿ ಶೋಭಾ ಅಪಾರ್ಟ್ಮೆಂಟ್ ಮೂಲಕ ಅವರು 2000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾಡಿದ್ದಾರೆ. ಇನ್ನು, ಈ ನೈಸ್ ಅಕ್ಕಪಕ್ಕದಲ್ಲಿರುವ ಸ್ವಾಧೀನ ಆಗಿರುವ ಭೂಮಿಗೆ ಬಡವರಿಗೆ ಯಾರಿಗೂ ಈ ನೈಸ್ ಕಂಪನಿ ಗುತ್ತಿಗೆದಾರ NOC ಕೊಟ್ಟಿಲ್ಲ. ಅಷ್ಟೇ ಅಲ್ಲ, ಶ್ರೀ ಸಿದ್ದಗಂಗಾ ಮಠಕ್ಕೆ NOC ನಿರಾಕರಿಸುತ್ತಾರೆ. ಆದರೆ, ಈ ರಸ್ತೆಯ ಸುತ್ತಮುತ್ತ 200-300 ಎಕರೆಯಷ್ಟು ಭೂಮಿಯನ್ನು ಮುಖ್ಯಮಂತ್ರಿ ಮತ್ತವರ ಪರಿವಾರ ಖರೀದಿಸಿದ್ದು ಹೇಗೆ? ಅವರು ಅನ್ಯಾಯದ ಮಾರ್ಗದಲ್ಲಿ ಕಸಿದುಕೊಂಡಿದ್ದಾರೆ. ಹೆದರಿಸಿ ಬೆದರಿಸಿ ಭೂಮಿಯನ್ನು ಕಿತ್ತುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor