ಕುಮಾರಸ್ವಾಮಿ ಅರಿಬೆ ಹಾವು ಬಿಡುತ್ತಾರೆ, ಆದರೆ ನಮ್ಮ ಹತ್ತಿರ ನಿಜವಾದ ಹಾವು ಇದ್ದಾವೆ: ಸಚಿವ ವಿಜಯಾನಂದ ಕಾಶಪ್ಪನವರ
ಬಾಗಲಕೋಟೆ: ಕೆಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬರೀ ಅರಿಬೆ ಹಾವು ಬಿಡುತ್ತಾರೆ. ಆದರೆ ನಮ್ಮ ಹತ್ತಿರ ನಿಜವಾದ ಹಾವು ಇದ್ದಾವೆ.. ಸಂದರ್ಭ ಬಂದಾಗ ಬಿಡುತ್ತಿವೆ ಎಂದು ಸಣ್ಣ ಕೈಗಾರಿಕಾ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ಬೀಳಗಿ ಪಟ್ಟಣದಲ್ಲಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಅವರು ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.
ನೈಸ್ ರಸ್ತೆ ವಿಚಾರವಾಗಿ ಸಚಿವರು ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ಆರೋಪ ಮಾಡಿದ ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕುಮಾರಸ್ವಾಮಿ ಅವರು ಯಾವಾಗಲೂ ಅರಿಬೆ ಹಾವು ಬಿಡುತ್ತಾರೆ ಎಂದು ತಿರುಗೇಟು ನೀಡಿದರು...
ರೈತರಿಗೆ ಕೇಂದ್ರ ಸರಕಾರ ದಿಂದ ಕಬ್ಬು ಬೆಳೆ ಎಂ ಎಸ್ ಪಿ...ಎಸ್ ಆರ್ ಪಿ ಫಿಕ್ಸ್ ಮಾಡಿಲ್ಲ. ಬರೀ ಸಿಎಂ ಗೆ ಆಹ್ವಾನ ಮಾಡಿದರೆ ಉಪಯೋಗ ಇಲ್ಲಾ... ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಲಿ ಮುಖ್ಯಮಂತ್ರಿ ಸಿದ್ಧರಿದ್ದಾರೆ ಎಂದು ಕಬ್ಬು ಬೆಳೆಗಾರ ಹೋರಾಟಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಕಾಶಪ್ಪನವರ ತಿರುಗೇಟು ನೀಡಿದರು.