×
Ad

ಕಲಬುರಗಿ: ಜಿಲ್ಲಾ ಕಾರ್ಮಿಕ ಅಧಿಕಾರಿ ಸೇರಿ ಇಬ್ಬರು ಅಮಾನತು

Update: 2023-11-07 22:48 IST

ರಮೇಶ್ ಸುಂಬಡ - ಅಮಾನತುಗೊಂಡ ಅಧಿಕಾರಿ

ಕಲಬುರಗಿ: ಕಾರ್ಮಿಕ ಇಲಾಖೆಯಲ್ಲಿ ಅಕ್ರಮವೆಸಗಿರುವ ಆರೋಪದಲ್ಲಿ ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸೇರಿ ಇಬ್ಬರನ್ನು ಅಮಾನತು ಮಾಡಲಾಗಿದೆ. 

ಈ ಕುರಿತು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ ಲಾಡ್,  ''ಕಲಬುರಗಿ ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿಯಾಗಿದ್ದ ರಮೇಶ್ ಸುಂಬಡ ಮತ್ತು ಚಿತ್ತಾಪುರ ತಾಲೂಕಿನ ಡಿಓ ಶರಣು ಬೆಲ್ಲದ್ ಎಂಬ ಇಬ್ಬರು ಕಾರ್ಮಿಕ ಅಧಿಕಾರಿಗಳ ವಿರುದ್ಧ ಇಲಾಖೆಯ ವಿವಿಧ ಯೋಜನೆಗಳಲ್ಲಿ ಆಕ್ರಮ ನಡೆಸಿರುವ ಬಗ್ಗೆ ಅಧಿಕಾರಿಗಳ ಆಂತರಿಕ ತನಿಖೆಯಿಂದ ದೃಢಪಟ್ಟಿರುವುದರಿಂದ ಅಮಾನತುಗೊಳಿಸಲಾಗಿದೆ'' ಎಂದು ಮಾಹಿತಿ ನೀಡಿದರು. 

ಕೋವಿಡ್ -19 ನಿರ್ವಹಣೆ, ಟೂಲ್ ಕಿಟ್ ವಿತರಣೆ, ಇಲಾಖೆಯಿಂದ ನಿಡಲಾಗುವ ವಿದ್ಯಾರ್ಥಿ ವೇತನಕ್ಕೆ ಅನುಮೋದನೆ ಸೇರಿ ಮದುವೆ ಮತ್ತು ಮರಣದ ಹಣ ಮಂಜೂರಾತಿ ಸೇರಿದಂತೆ ಕಾರ್ಮಿಕ ಕಾರ್ಡ್ ವಿತರಣೆಯಲ್ಲಿ ಆಕ್ರಮ ನಡೆಯುತ್ತಿದೆ ಎಂದು ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಸುಂಬಡ ಅವರ ವಿರುದ್ಧ ಕಾರ್ಮಿಕರ ಸಂಘಟನೆಗಳು ಹಲವು ಬಾರಿ ಹೋರಾಟ ಮತ್ತು ತನಿಖೆಗೆ ಒತ್ತಾಯಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News