×
Ad

ರಾಜ್ಯದಲ್ಲಿ 50 ಸಾವಿರ ಕೋಟಿ ರೂ.ವೆಚ್ಚದ ಒತ್ತುವರಿ ಅರಣ್ಯ ಭೂಮಿ ವಶಕ್ಕೆ: ಸಚಿವ ಈಶ್ವರ್ ಖಂಡ್ರೆ

Update: 2026-05-22 23:00 IST

ಬೆಂಗಳೂರು: ಬೆಂಗಳೂರಿನಲ್ಲಿ 10 ಸಾವಿರ ಕೋಟಿ ರೂ. ಹಾಗೂ ರಾಜ್ಯದಲ್ಲಿ ರೂ 50ಸಾವಿರ ಕೋಟಿ ರೂ. ವೆಚ್ಚದ ಒತ್ತುವರಿ ಅರಣ್ಯ ಭೂಮಿಯನ್ನು ಇಲಾಖೆಯ ವಶಕ್ಕೆ ಪಡೆಯಲಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಶುಕ್ರವಾರ ಯಶವಂತಪುರ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಸಂಸ್ಥೆಯ ಸಿಎಸ್‍ಆರ್ ನಿಧಿ ಅಡಿಯಲ್ಲಿ ಬಂಡೀಪುರ, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿಗೆ ಸುರಕ್ಷತೆಯ ದೃಷ್ಟಿಯಿಂದ ಸುರಕ್ಷಾ ಕ್ಯಾಬಿನ್‍ಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ಧಾರಿ ನಾವೆಲ್ಲರೂ ಪರಿಸರ ಉಳಿಸಿ, ಬೆಳಸಲು ಶ್ರಮಿಸಬೇಕು. ಹವಮಾನ ಬದಲಾವಣೆ ಮತ್ತು ಬರ, ಬಿಸಿಲು ಮತ್ತು ಮಳೆ ಸಕಾಲಕ್ಕೆ ಆಗಬೇಕು. ಹವಾಮಾನ ವೈಪರೀತ್ಯದಿಂದ ಪ್ರವಾಹ, ತಾಪಮಾನ ಹೆಚ್ಚಳವಾಗಲಿದೆ ಹಾಗೂ ತಾಪಮಾನ 40ರಿಂದ 48ಡಿಗ್ರಿವರೆಗೆ ತಲುಪುತ್ತಿದೆ ಎಂದರು.

ಕಾರವಾರ, ಶಿವಮೊಗ್ಗ, ದಕ್ಷಿಣ ಕನ್ನಡ ವಿವಿಧ ಜಿಲ್ಲೆಗಳಲ್ಲಿ ಅರಣ್ಯ ಹೇರಳವಾಗಿದೆ ವೈವಿಧ್ಯಮಯ ಪ್ರಾಣಿ, ಪಕ್ಷಿಗಳು ಜೀವಿಸುತ್ತಿವೆ. ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ದುಬಾರೆ ಆನೆ ತರಬೇತಿ ಕೇಂದ್ರದಲ್ಲಿ ಆನೆ ದಾಳಿಯಿಂದ ಮಹಿಳೆ ಸಾವು ಸಂಭವಿಸಿರುವುದು ಶೋಚನೀಯ ಸಂಗತಿ ಎಂದು ತಿಳಿಸಿದರು.

ಬಂಡೀಪುರದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಿದ್ದು, ದೇಶದಲ್ಲಿ ಎರಡನೇಯ ಸ್ಥಾನ ಹೊಂದಿದೆ. ದೇಶದಲ್ಲಿ ಅತಿ ಹೆಚ್ಚು ಆನೆಗಳ ಸಂತತಿ ನಮ್ಮ ರಾಜ್ಯದಲ್ಲಿ ಇದೆ. ಮಾನವ ಮತ್ತು ಪ್ರಾಣಿಗಳ ಸಂಘರ್ಷದಲ್ಲಿ ಪ್ರತಿವರ್ಷ 30ರಿಂದ40 ಸಾವು ಸಂಭವಿಸುತ್ತಿದೆ. ಸದರಿ ವಿಷಯದ ಮೇಲೆ ಕ್ರಮ ಕೈಗೊಳ್ಳಲು ಅರಣ್ಯಧಿಕಾರಿಗಳು ಕಾರ್ಯನಿರತರಾಗಿದ್ದಾರೆ ಎಂದು ತಿಳಿಸಿದರು.

ಪ್ರಾಣಿಗಳ ದಾಳಿಯನ್ನು ತಡೆಯುವ ಮೂಲಕ ಆನೆ, ಹುಲಿ, ಚಿರತೆಗಳನ್ನು ಕಾಡಿಗೆ ಹಿಂತಿರುಗಿಸುವ ಕೆಲಸ ಮಾಡುತ್ತಾ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟುತ್ತಿದ್ದಾರೆ ಎಂದು ತಿಳಿಸಿದರು.

ಎಂಇಐ ಅಧ್ಯಕ್ಷ ಎಸ್.ಮನೋಹರ್ ಮಾತನಾಡಿ, ಸಾಮಾಜಿಕ ಜವಾಬ್ಧಾರಿಯಿಂದ ಸಿಎಸ್‍ಆರ್‍ನಿಧಿ ಅಡಿಯಲ್ಲಿ ಈಗಾಗಲೇ ಶಾಲೆಗಳಿಗೆ ಸ್ಪಾರ್ಟ್ ಕ್ಲಾಸ್ ಅನುದಾನ ನೀಡಲಾಗಿದೆ. ವನ್ಯ ಜೀವಿ ಪರಿಪಾಲಕರು, ಸಿಬ್ಬಂದಿಗೆ ಅನುಕೂಲವಾಗಲಿ ಎಂದು ಸುರಕ್ಷಾ ಕ್ಯಾಬಿನ್‍ಗಳನ್ನು ನೀಡಲಾಗುತ್ತಿದೆ. ಪರಿಸರ ಉಳಿದರೆ ಮಾನವ ಕುಲ ಉಳಿಯುತ್ತದೆ ಎಂದು ಹೇಳಿದರು.

ಅರಣ್ಯ ಸಿಬ್ಬಂದಿ, ಆನೆ ದಾಳಿಗೆ ಒಳಗಾದ ವ್ಯಕ್ತಿಗಳಿಗೆ ಸಹಾಯಹಸ್ತ ಹಾಗೂ ಅರಣ್ಯ ಪ್ರದೇಶ ವ್ಯಾಪ್ತಿಯ ಶಾಲೆಗಳ ಅಭಿವೃದ್ದಿ, ಕುಡಿಯುವ ನೀರಿನ ವ್ಯವಸ್ಥೆ ಸಹ ನಮ್ಮ ಎಂಇಐ ಸಂಸ್ಥೆ ಮೂಲಕ ಸಿಎಸ್‍ಆರ್ ನಿಧಿ ಅಡಿಯಲ್ಲಿ ಮಾಡಲಾಗಿದೆ. ಅರಣ್ಯ ಭೂಮಿ ಉಳಿಸಲು ಸಚಿವ ಈಶ್ವರ್ ಖಂಡ್ರೆ ಅವರು ಅಪಾರ ಶ್ರಮ ಹಾಕಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಕುಮಾರ್ ಪುಷ್ಕರ್, ಎಂಇಐ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಅನಿತಾ.ಸಿ, ಲಕ್ಷ್ಮಣ್, ಕಾರ್ಯದರ್ಶಿ ಕವಿತಾ, ಅಧಿಕಾರಿಗಳಾದ ಶರಣಪ್ಪ, ಸಂತೋಷ್, ಮಂಜುನಾಥ್, ಹುಲಿಯಪ್ಪ, ಬಾಬಾ ಸಾಹೇಬ್ ಮುಚ್ಚಂಡಿ, ತಿಮ್ಮಣ್ಣ, ರೇಖಾ, ಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News