×
Ad

ಕಸಾಪ ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ

Update: 2026-05-19 20:17 IST

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‍ನಿಂದ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪ್ರಶಸ್ತಿಗಳಿಗಾಗಿ ಕೃತಿಗಳನ್ನು ಆಹ್ವಾನ ಮಾಡಲಾಗಿದೆ. 2025ರ ಜನವರಿ 1ರಿಂದ ಡಿಸೆಂಬರ್ 31ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳುಹಿಸಿಕೊಡಬಹುದಾಗಿದೆ.

2025ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಒಟ್ಟು 55 ದತ್ತಿ ಪುಸ್ತಕಗಳಿಗೆ ವಿವಿಧ ದತ್ತಿ ಪುರಸ್ಕಾರಗಳನ್ನು ಕನ್ನಡ ಸಾಹಿತ್ಯ ಪರಿಷತ್ ನೀಡುತ್ತಿದೆ. ಅದಕ್ಕಾಗಿ ಬೇರೆ ಬೇರೆ ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದು, ಇದಕ್ಕಾಗಿ 59 ವಿವಿಧ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

ಪ್ರತಿ ದತ್ತಿ ಪ್ರಶಸ್ತಿಯ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು, ಯಾವ ದತ್ತಿಗಾಗಿ ಎನ್ನುವುದನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ಬರೆದು ‘ಆಡಳಿತಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು-560018’ ವಿಳಾಸಕ್ಕೆ ಜೂ.20ರ ಒಳಗೆ ತಲುಪುವಂತೆ ಕಳುಹಿಸಬೇಕು. ತಡವಾಗಿ ಬಂದ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ.

ಯಾವುದೇ ಪುಸ್ತಕ ಪ್ರಶಸ್ತಿ ಪುರಸ್ಕøತರು ಪ್ರಶಸ್ತಿ ಪಡೆದ ವಿಭಾಗಕ್ಕೆ 3 ವರ್ಷ ಅರ್ಜಿ ಸಲ್ಲಿಸುವಂತಿಲ್ಲ. ಯಾವುದೇ ಪುಸ್ತಕ ದತ್ತಿ ಪುರಸ್ಕಾರ ಬರಹಗಾರರಿಗೆ 3 ಸಲ ಬಂದಿದ್ದೇ ಆದರೆ ಜೀವಮಾನ ಪೂರ್ತಿ ದತ್ತಿ ಪುರಸ್ಕಾರಕ್ಕೆ ಅವರು ಅರ್ಜಿ ಸಲ್ಲಿಸುವಂತಿಲ್ಲ. ಯಾವುದೇ ಪ್ರಶಸ್ತಿಗೆ ಅರ್ಹ ಗ್ರಂಥಗಳು ಬಾರದಿದ್ದಾಗ ಆ ವರ್ಷ ಪ್ರಶಸ್ತಿಯನ್ನು ನೀಡದಿರುವ ಹಕ್ಕು ಪರಿಷತ್‍ಗೆ ಇರುತ್ತದೆ.

ಒಂದಕ್ಕಿತ ಹೆಚ್ಚು ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಕಸಾಪಕ್ಕೆ ಇರುತ್ತದೆ. ಪಿಎಚ್.ಡಿ. ಗ್ರಂಥಗಳು ಹಾಗೂ ನಿಘಂಟುಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಭಾಗವಹಿಸುತ್ತಿರುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ಸೂಚಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ವಿಳಾಸ, ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು.

ಹೆಚ್ಚಿನ ಮಾಹಿತಿಗಾಗಿ https://kannadasahithyaparishattu.in, www.kasapa.inಟ ವೆಬ್‍ಸೈಟ್ ಅಥವಾ ದೂ: 080-26612991, 26623584ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News