ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಗೆ ಗೃಹ ಇಲಾಖೆ ಮೇಜರ್ ಸರ್ಜರಿ ಮಾಡಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿ 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ರನ್ನು ವರ್ಗಾವಣೆ ಮಾಡಿ ನೂತನ ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಆರ್.ಹಿತೇಂದ್ರರನ್ನು ನಿಯೋಜಿಸಲಾಗಿದೆ.

ಮಂಗಳೂರಿನ ಪಶ್ಚಿಮ ವಲಯದ ಐಜಿಪಿ (IGP, ಪಶ್ಚಿಮ ವಲಯ) ಹುದ್ದೆಗೆ 2007ರ ಬ್ಯಾಚ್ ನ ಕರ್ನಾಟಕ ಕೇಡರ್ ನ ಐಪಿಎಸ್ (IPS) ಅಧಿಕಾರಿಯಾಗಿರುವ ಎನ್. ಶಶಿಕುಮಾರ್ ಅವರನ್ನು ನೇಮಿಸಲಾಗಿದೆ

ಬೆಂಗಳೂರು ಐದು ಪೊಲೀಸ್ ಕಮಿಷನರೇಟ್ :

ಇನ್ನೂ ಈ ಹಿಂದೆ ನಿರ್ಧರಿಸಿದಂತೆ ಬೆಂಗಳೂರು ನಗರವನ್ನು ಐದು ಕಮಿಷನರೇಟ್ ವ್ಯಾಪ್ತಿಗಳನ್ನಾಗಿ ಮಾಡಿದ್ದು ನೂತನವಾಗಿ ಐದು ಕಮಿಷನರ್ ಗಳ ನೇಮಕ ಮಾಡಲಾಗಿದೆ.

ಆರ್.ಹೀತೆಂದ್ರ ಐದು ಕಮಿಷನರೇಟ್ ವಿಭಾಗಗಳಿಗೆ ಚೀಫ್ ಕಮೀಷನರ್ ಆಗಿರಲಿದ್ದಾರೆ. ಉಳಿದಂತೆ ಲಾಬೂ ರಾಮ್ - ಕೇಂದ್ರ ವಲಯ ಪೊಲೀಸ್ ಕಮಿಷನರ್, ಡಾ.ಪಿಎಸ್.ಹರ್ಷ - ಪೂರ್ವ ವಲಯ ಪೊಲೀಸ್ ಕಮಿಷನರ್, ವಿಕಾಸ್ ಕುಮಾರ್ ವಿಕಾಸ್ - ಪಶ್ಚಿಮ ವಲಯ ಪೊಲೀಸ್ ಕಮಿಷನರ್, ಡಾ,ಎಂ.ಬಿ. ಬೋರಲಿಂಗಯ್ಯ - ಉತ್ತರ ವಲಯ ಪೊಲೀಸ್ ಕಮಿಷನರ್, ಸಿ.ವಂಶಿಕೃಷ್ಣ - ದಕ್ಷಿಣ ವಲಯ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.

ಇದಲ್ಲದೆ ಸೀಮಂತ್ ಕುಮಾರ್ - ಅಗ್ನಿ ಶಾಮಕ ದಳ ಮತ್ತು ತುರ್ತು ಸೇವೆ ಎಡಿಜಿಪಿ

ಹೇಮಂತ್ ನಿಂಬಾಳ್ಕರ್ - ಬೆಂಗಳೂರು ಟ್ರಾಫಿಕ್ ಪೊಲೀಸ್ ಕಮೀಷನರ್

ಅನುಪಮ್ ಅಗರ್ವಾಲ್ - ಐಜಿಪಿ - ಕೆಎಸ್ ಆರ್ ಪಿ

ಕುಲ್ದಿಪ್ ಕುಮಾರ್ ಜೈನ್ - ಕಮೀಷನರ್ ಕಲಬುರಗಿ

ಶರಣಪ್ಪ - ಡಿಐಜಿ ರೈಲ್ವೆ

ಡಾ, ಅನುಪ್ ಶೆಟ್ಟಿ- ಪೂರ್ವ ಟ್ರಾಫಿಕ್ ಡಿಸಿಪಿ

ಲಕ್ಷ್ಮಣ್‌ ನಿಂಬರ್ಗಿ - ಡಿಸಿಪಿ ಸಿಎಆರ್. ಹೆಡ್ ಕ್ಯಾಟರ್

ಲೋಕೇಶ್ ಜಗಲಾಸರ್ - ಡಿಸಿಪಿ ಟ್ರಾಫಿಕ್ ಸೆಂಟ್ರಲ್

ಯತೀಶ್ ಎನ್ - ಡಿಸಿಪಿ ಸೌತ್ ವೆಸ್ಟ್ ಬೆಂಗಳೂರು

ಸೈದುಲು ಅಡಾವತ್ - ಎಸ್ಪಿ ಐಎಸ್ ಡಿ ಬೆಂಗಳೂರು

ಶ್ರೀಹರಿ ಬಾಬು- ಡಿಸಿಪಿ ವೈಟ್ ಫೀಲ್ಡ್ ವಿಭಾಗ

ಅಶೋಕ್‌ ಕೆವಿ - ಡಿಸಿಪಿ ಪೀಣ್ಯಾ ವಿಭಾಗ

ವಿಕ್ರಮ್ ಆಮ್ಟೆ - ಡಿಸಿಪಿ ಉತ್ತರ ವಿಭಾಗ

ಲಕ್ಷ್ಮೀ ಗಣೇಶ್ - ಡಿಸಿಪಿ ಗಾಂಧಿನಗರ ವಿಭಾಗ

ಪಿವಿ ಸ್ನೇಹ - ಟ್ರಾಫಿಕ್ ಪಶ್ಚಿಮ ವಿಭಾಗ

ಡಾ, ಗೀತಾ ಎಂ.ಎಸ್. - ಡಿಸಿಪಿ ಪೂರ್ವ ವಿಭಾಗ

ರಂಜಿತ್ ಕುಮಾರ್ ಬಂಡಾರು - ಡಿಸಿಪಿ ಆಡಳಿತ ವಿಭಾಗ

ಚನ್ನಬಸವ ಎಲ್ - ಡಿಸಿಪಿ ಇಂದಿರಾ ನಗರ ವಿಭಾಗಕ್ಕೆ ಸೇರಿ ಪ್ರಮುಖ ವರ್ಗವಾಣೆ ಮಾಡಿ ಅದೇಶ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾಗರಾಜ್ ಅಪ್ಪಸಂದ್ರ/ವಾರ್ತಾಭಾರತಿ

ಕ್ರೈಂ ಹಾಗೂ ಹೈಕೋರ್ಟ್ ವರದಿಗಾರರು

ನಾಗರಾಜ್ ಅಪ್ಪಸಂದ್ರ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ‘ವಾರ್ತಾಭಾರತಿ’ ಡಿಜಿಟಲ್ ನಲ್ಲಿ ಕ್ರೈಂ ಹಾಗೂ ಹೈಕೋರ್ಟ್ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.