×
Ad

ಮೂಡಿಗೆರೆ: ಹೇಮಾವತಿ ನದಿಯಲ್ಲಿ ವೃದ್ಧೆಯ ಮೃತದೇಹ ಪತ್ತೆ

Update: 2023-07-19 23:24 IST

ಸಾಂದರ್ಭಿಕ ಚಿತ್ರ

ಮೂಡಿಗೆರೆ: ತಾಲೂಕಿನ ದಾರದಹಳ್ಳಿ ಸಮೀಪದ ಹೇಮಾವತಿ ನದಿಯಲ್ಲಿ 60 ವರ್ಷದ ವೃದ್ಧೆಯ ಶವ ವೊಂದು ಮರದ ಕೊಂಬೆಯೊಂದಕ್ಕೆ ಸಿಕ್ಕಿಹಾಕಿ ಕೊಂಡ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.

ದಾರದಹಳ್ಳಿ ಕಾಲನಿ ನಿವಾಸಿ ದೇವಮ್ಮ (60) ಮೃತರು ಎಂದು ತಿಳಿದುಬಂದಿದೆ.

ದೇವಮ್ಮ ಅವರು ದಾರದಹಳ್ಳಿ ಕಾಲನಿಯಲ್ಲಿ ವಾಸ ಮಾಡುತ್ತಿದ್ದು, ಕಳೆದ 3 ದಿನಗಳಿಂದ ಮನೆಯಿಂದ ಕಾಣೆಯಾಗಿದ್ದರು. ದೇವಮ್ಮ ಅವರು ಆಗಾಗ ನೆಂಟರ ಮನೆಗೆ ಹೋಗಿ ಬರುತ್ತಿದ್ದರಿಂದ ಅವರ ಪುತ್ರರು ಈಗಲೂ ನೆಂಟರ ಮನೆಗೆ ಹೋಗಿ ರಬಹುದೆಂದು ಭಾವಿಸಿ ಸುಮ್ಮನಿದ್ದರೆನ್ನಲಾಗಿದೆ. ಆದರೆ, ಬುಧವಾರ ದೇವಮ್ಮ ಅವರ ಮೃತದೇಹ, ವಾಸದ ಮನೆಯಿಂದ ಸುಮಾರು ಒಂದೂವರೆ ಕಿ.ಮೀ. ದೂರದ ಹೇಮಾವತಿ ನದಿಯ ಪಕ್ಕದಲ್ಲಿರುವ ಮರದ ಕೊಂಬೆಯೊಂದಕ್ಕೆ ಸಿಕ್ಕಿಹಾಕಿಕೊಂಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಸಮಾಜ ಸೇವಕ ಫಿಶ್ ಮೋಣು ತಂಡದ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News