ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ನಾಳೆಯಿಂದ ಪರಿಷ್ಕೃತ ದರ ಜಾರಿ

Update: 2026-07-23 21:15 IST

ಸಾಂದರ್ಭಿಕ ಚಿತ್ರ | ನಂದಿನಿ ತುಪ್ಪ

ಬೆಂಗಳೂರು : ಕೆಎಂಎಫ್ ಅಂಗ ಸಂಸ್ಥೆಯಾದ ಬೆಂಗಳೂರು ಸಹಕಾರ ಹಾಲು ಒಕ್ಕೂಟವು ಪ್ರಸಿದ್ಧ ನಂದಿನಿ ಬ್ರ್ಯಾಂಡ್‍ನ ತುಪ್ಪ ಮತ್ತು ಬೆಣ್ಣೆ ಬೆಲೆ ದಿಢೀರ್ ಏರಿಕೆ ಮಾಡಿದ್ದು, ಅಡುಗೆ ಮನೆಯ ಅತ್ಯಗತ್ಯ ಪದಾರ್ಥಗಳ ನೂತನ ದರಗಳು ಶುಕ್ರವಾರದಿಂದಲೇ (ಜು.24) ಜಾರಿಗೆ ಬರಲಿವೆ.

ಈ ಹಿಂದೆ ಪ್ರತಿ ಕೆಜಿ ತುಪ್ಪವನ್ನು 700ರೂ.ನಂತೆ ಮಾರಾಟ ಮಾಡಲಾಗುತ್ತಿತ್ತು. ಈಗ 15ರೂ. ಏರಿಕೆ ಮಾಡಿದ್ದು, ಶುಕ್ರವಾರದಿಂದ ಪ್ರತಿ ಕೆಜಿ ತುಪ್ಪದ ಬೆಲೆ 715 ರೂ., ತುಪ್ಪ ಅರ್ಧ ಲೀಟರ್ (ಪಾಕೇಟ್) 358 ರೂ.. ಆಗಲಿದೆ.

ಬೆಣ್ಣೆ ಅರ್ಧ ಲೀಟರ್‌ ಗೆ (ಜಾರ್) 368 ರೂ.., ಒಂದು ಲೀಟರ್‌ ಗೆ 735 ರೂ.., 5 ಲೀಟರ್‌ ಗೆ 3575 ರೂ.,ಗೆ ಏರಿಕೆಯಾಗಿದೆ. ಬೆಣ್ಣೆ ಅರ್ಧ ಕೆಜಿಗೆ 305 ರೂ..ಇದ್ದದ್ದು ಇದೀಗ 330 ರೂ.,ಗೆ ಹೆಚ್ಚಳವಾಗಿದೆ. 200 ಗ್ರಾಂ ಬೆಣ್ಣೆಗೆ 135 ರೂ., ಇದ್ದು ಸಾಲ್ಟೆಟ್ ಬೆಣ್ಣೆ ಅರ್ಧ ಕೆಜಿಗೆ 310 ರೂ.,ಗೆ ಏರಿಕೆ ಮಾಡಲಾಗಿದೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟ ತಿಳಿಸಿದೆ.

ಒಟ್ಟಿನಲ್ಲಿ ತುಪ್ಪ ಹಾಗೂ ಬೆಣ್ಣೆ ದರ ಏರಿಕೆ ಹಿನ್ನೆಲೆಯಲ್ಲಿ ಗೃಹ ಬಳಕೆ ಹಾಗೂ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಲಿದ್ದು, ತುಪ್ಪ, ಬೆಣ್ಣೆಯಿಂದ ಮಾಡುವ ಆಹಾರ ಪದಾರ್ಥಗಳ ದರವು ಏರಿಕೆಯಾಗುವ ಸಾಧ್ಯತೆಗಳಿವೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News