ಕುರ್ಚಿ ಬಿಕ್ಕಟ್ಟು | ಶೀಘ್ರದಲ್ಲಿಯೇ ಹೈಕಮಾಂಡ್ ಸಭೆ: ಪ್ರಿಯಾಂಕ್ ಖರ್ಗೆ
Update: 2025-11-26 21:06 IST
ಪ್ರಿಯಾಂಕ್ ಖರ್ಗೆ | Photo Credit : PTI
ಬೆಂಗಳೂರು, ನ.26: ರಾಜ್ಯ ಸರಕಾರದಲ್ಲಿನ ಅಧಿಕಾರ ಹಂಚಿಕೆ ಚರ್ಚೆ ಕುರಿತು ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಭೆ ನಡೆಸಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಿಲ್ಲಿಯಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಸಭೆ ಇದೆ. ಬಿಹಾರ ಫಲಿತಾಂಶ ಬಗ್ಗೆಯೂ ಚರ್ಚೆ ನಡೆಯಲಿದೆ. ಆಗ ರಾಜ್ಯದ ಗೊಂದಲದ ಬಗ್ಗೆ ಮಾತನಾಡಿ ಬಗೆಹರಿಸುತ್ತಾರೆ ಎಂದು ಮಾಹಿತಿ ನೀಡಿದರು.
ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ನಮ್ಮ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು. ಇವರ ಹೊರತಾಗಿ ಹೈಕಮಾಂಡ್ ತೀರ್ಮಾನಿಸಬೇಕು. ಅದೇ ರೀತಿ ಹೊಸ ಅಧ್ಯಕ್ಷರ ಬಗ್ಗೆಯೂ ಅವರೇ ತೀರ್ಮಾನಿಸಬೇಕು ಎಂದು ಅವರು ಹೇಳಿದರು.