×
Ad

ಸಾರಿಗೆ ಬಸ್‍ಗಳಲ್ಲಿನ ‘ತಂಬಾಕು ಉತ್ಪನ್ನಗಳ ಜಾಹೀರಾತು’; ಇನ್ನೂ 15 ದಿನಗಳಲ್ಲಿ ತೆರವುಗೊಳಿಸಲು ಸೂಚನೆ

Update: 2026-01-31 18:29 IST

ಬೆಂಗಳೂರು : ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಸೇರಿದಂತೆ ಸಾರಿಗೆ ನಿಗಮಗಳ ಬಸ್‍ಗಳಲ್ಲಿ ಆಳವಡಿಸಲಾಗಿರುವ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವಂತಹ ಜಾಹೀರಾತುಗಳನ್ನು ಇನ್ನೂ 15 ದಿನಗಳಲ್ಲಿ ತೆರವುಗೊಳಿಸಬೇಕು’ ಎಂದು ಕೆಎಸ್ಸಾರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ) ಎಸ್.ರಾಜೇಶ್ ಸೂಚನೆ ನೀಡಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ‘ಇನ್ನೂ ಮುಂದೆ ನಿಗಮದ ಬಸ್ಸುಗಳ ಮೇಲೆ ಹಾಗೂ ನಿಗಮದ ಬಸ್ ನಿಲ್ದಾಣಗಳಲ್ಲಿನ ಜಾಹೀರಾತು ಹೋರ್ಡಿಂಗ್ಸ್‌ ಮತ್ತು ಗ್ಲೋಸೈನ್ ಫಲಕಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ಅಳವಡಿಸಬಾರದು/ಪ್ರದರ್ಶಿಸಬಾರದು’ ಎಂದು ನಿರ್ದೇಶನ ನೀಡಿದ್ದಾರೆ.

‘ಸಾರಿಗೆ ವಿಭಾಗಗಳ ವ್ಯಾಪ್ತಿಯಲ್ಲಿನ ಬಸ್ ನಿಲ್ದಾಣಗಳಲ್ಲಿನ ಜಾಹೀರಾತು ಹೋರ್ಡಿಂಗ್ಸ್‌ ಮತ್ತು ಗ್ಲೋಸೈನ್ ಫಲಕಗಳನ್ನು ಅಳವಡಿಸಲು ಆಯ್ಕೆಯಾಗಿರುವ ಪರವಾನಗಿದಾರರಿಗೆ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ಪ್ರಚಾರ ಮಾಡದಂತೆ ನೋಟಿಸ್ ಜಾರಿ ಮಾಡಬೇಕು’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News