×
Ad

ಶೈಕ್ಷಣಿಕ ಸಮಸ್ಯೆಗಳ ಬಗೆಹರಿಸುವಂತೆ ರುಪ್ಸಾ ಸಂಘಟನೆಯಿಂದ ಡಿ.12ರಂದು ಪ್ರತಿಭಟನೆ

Update: 2023-12-10 22:05 IST

ಬೆಂಗಳೂರು: ರಾಜ್ಯದ ಶೈಕ್ಷಣಿಕ ಸಮಸ್ಯೆಗಳ ಬಗೆಹರಿಸುವ ಕುರಿತು ಸರಕಾರದ ಗಮನ ಸೆಳೆಯಲು ಡಿ.12ರಂದು ಬೆಳಗಾವಿ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಲು ರುಪ್ಸಾ ಕರ್ನಾಟಕ ಸಂಘಟನೆ ಕರೆ ನೀಡಿದೆ.

ರವಿವಾರ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ, ದೇಶದ ಹಲವು ರಾಜ್ಯಗಳಲ್ಲಿ ಅನುದಾನ ಬಯಸುವ ಸ್ಥಳೀಯ ಮಾಧ್ಯಮ ಶಾಲೆಗಳಿಗೆ ತಕ್ಷಣ ಅನುದಾನ ನೀಡಲು ಆಯಾ ಸರಕಾರಗಳು ಮುಂದಾಗುತ್ತವೆ. ಕಾರಣ ಆಯಾ ರಾಜ್ಯದ ಭಾಷೆ ರಕ್ಷಣೆ ಪ್ರಮುಖವಾಗಿ ಪರಿಗಣಿಸುವ ಸಂದರ್ಭದಲ್ಲಿ ನಮ್ಮ ರಾಜ್ಯ ಕನ್ನಡ ಶಾಲೆಗಳನ್ನು ಮುಚ್ಚಿ ಇಂಗ್ಲಿಷ್‌ ಗೆ ಪ್ರಧಾನ್ಯತೆ ಕೊಡುತ್ತಿರುವುದು ದುರಂತವೇ ಸರಿ ಎಂದು ಖಂಡಿಸಿದ್ದಾರೆ.

ಕನ್ನಡ ಶಾಲೆ ಉಳಿಸುವ ಕುರಿತು ಸರಕಾರ ವಿಶೇಷವಾಗಿ ಗಮನ ಹರಿಸಬೇಕು. 29 ವರ್ಷಗಳಿಂದ ಸಂಬಳ ಇಲ್ಲದೆ ದುಡಿಯುತ್ತಿರುವ ಶಿಕ್ಷಕರಿಗೆ ಸಂಬಳವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಖಾಸಗಿ ಅನುದಾನ ರಹಿತ ಬಜೆಟ್ ಶಾಲೆಗಳ ಪರಿಸ್ಥಿತಿ ಕುರಿತು ಹಲವು ಬಾರಿ ವಿನಂತಿಸಿ ಕೊಂಡರೂ ನಮ್ಮ ಶಿಕ್ಷಣ ಮಂತ್ರಿಗಳಿಗೆ ಕೇಳಿಸುತ್ತಿಲ್ಲ. ಬಡ ಮಕ್ಕಳ ಶಿಕ್ಷಣದ ಉಸಿರಾದ ಆರ್ ಟಿಇ ಮರು ಅನುಷ್ಠಾನದ ಬಯಕೆ ಹಾಗೇ ಉಳಿದಿದೆ. ಈ ಎಲ್ಲ ಕಾರಣಗಳಿಗಾಗಿ ಸರಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News