×
Ad

ಪಿಯುಸಿ ಪರೀಕ್ಷೆ-2: 13 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು, ಒಬ್ಬ ಡಿಬಾರ್

Update: 2025-04-25 23:02 IST

ಸಾಂದರ್ಭಿಕ ಚಿತ್ರ | PC: pexels

ಬೆಂಗಳೂರು : ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯುತ್ತಿದ್ದು, ಶುಕ್ರವಾರ ನಡೆದ ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಜೀವಶಾಸ್ತ್ರ ಪರೀಕ್ಷೆಯಲ್ಲಿ 13 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಬ್ಬರನ್ನು ಡಿಬಾರ್ ಮಾಡಲಾಗಿದೆ.

ಪರೀಕ್ಷೆಗೆ 94,687 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 81,097 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, 13,590 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಬೆಂಗಳೂರಿನ ಪಿಯು ಕಾಲೇಜುವೊಂದರಲ್ಲಿ ವಿದ್ಯಾರ್ಥಿಯೊಬ್ಬರು ನಕಲು ಮಾಡಿ ಪರೀಕ್ಷಾ ದುರಾಚಾರವನ್ನು ಎಸಗಿದ್ದು, ಅವರನ್ನು ಡಿಬಾರ್ ಮಾಡಲಾಗಿದೆ.

ವಿಜಯಪುರದಲ್ಲಿ 1,213, ದಾವಣಗೆರೆಯಲ್ಲಿ 1,067, ಕಲಬುರಗಿ 1,074, ಬೀದರ್‌ನಲ್ಲಿ 883, ರಾಯಚೂರಿನಲ್ಲಿ 947, ಬಳ್ಳಾರಿ 649 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗೈರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News