ಪ್ರಧಾನಿ ಮೋದಿ ಸರಕಾರ ಕಬ್ಬು ಬೆಳೆಗಾರರ ಪರವಾಗಿದೆ : ಆರ್.ಅಶೋಕ್
ಬೆಂಗಳೂರು : ಬೆಂಬಲ ಬೆಲೆಗಾಗಿ ಸಮಿತಿ ರಚನೆ ಸೇರಿದಂತೆ ಕಬ್ಬು ಬೆಳೆಗಾರರ ಪರವಾಗಿ ಕೇಂದ್ರ ಸರಕಾರ ಕಾರ್ಯನಿರ್ವಹಿಸುತ್ತಿದ್ದು, ಪ್ರಧಾನಿ ಮೋದಿ ನಿಮ್ಮ ಪರವಾಗಿದ್ದಾರೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರಕಾರ ಕಬ್ಬಿಗೆ ಬೆಂಬಲ ಬೆಲೆ ಬಗ್ಗೆ ತೀಮಾನ ಕೈಗೊಂಡಿದ್ದು, ಎಂಎಸ್ಪಿಗೆ ಸಂಬಂಧಿಸಿದಂತೆ ಆಯೋಗ ರಚಿಸಲಾಗಿದೆ. ಕೇಂದ್ರ ಸರಕಾರ ಕಬ್ಬು ಬೆಳೆಗಾರರ ಪರವಾಗಿದೆ. ರೈತರು ಏಳು ಬೇಡಿಕೆಗಳನ್ನು ಇಟ್ಟಿದ್ದು, ಅವುಗಳನ್ನು ಈಡೇರಿಸಲು ಕ್ರಮ ವಹಿಸಲಾಗುತ್ತಿದೆ. 2014 ಕ್ಕಿಂತ ಮುನ್ನ ರೈತರು ಕಬ್ಬು ನೀಡಿದ ಬಳಿ ವರ್ಷಗಟ್ಟಲೆ ಕಾಯಬೇಕಿತ್ತು.ಆಗ ಎಂಎಸ್ಪಿ ಇರಲಿಲ್ಲ. ರೈತರು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದರು. ಎನ್ಡಿಎ ಅಧಿಕಾರಕ್ಕೆ ಬಂದ ನಂತರ, ಯುಪಿಎ ಉಳಿಸಿಕೊಂಡಿದ್ದ 16,600ಕೋಟಿ ರೂ. ಬಾಕಿಯನ್ನು ನೀಡಲಾಯಿತು. ಎಫ್ಆರ್ಪಿ ಮೊತ್ತವನ್ನು 30 ರಿಂದ 40 ರೂ. ಗೆ ಹೆಚ್ಚಿಸಿದ್ದು, 2026 ರಲ್ಲಿ 365 ರೂ. ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಡಿಪಿ ಬೆಳವಣಿಗೆ ಬಹಳ ವೇಗವಾಗಿದೆ ಎಂದು ವಿವಿಧ ಸಮೀಕ್ಷೆಗಳು ಹೇಳಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಕಾಕ್ರೋಚ್ ಪಾರ್ಟಿ ಜೊತೆ ಸೇರಿ, ನೇಪಾಳದಲ್ಲಿ ಮಾಡಿದಂತೆ ದಂಗೆ ಮಾಡುತ್ತೇವೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಪ್ರಚೋದನೆ ಮಾಡಲಾಗುತ್ತಿದೆ. ಜಿರಳೆ ಪಾರ್ಟಿಗೆ ಬೇರೆ ದೇಶಗಳಿಂದ ಹಣ ಬರುತ್ತಿದೆ ಎಂಬ ಆರೋಪ ಇದೆ. ದೇಶದ ಮೇಲೆ ಕತ್ತಿ ಮಸೆಯುವವರಿಗೆ ಬೇರೆ ದೇಶದಲ್ಲಿ ತರಬೇತಿ ಸಿಕ್ಕಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಜಿರಳೆ ಪಾರ್ಟಿಗೆ ಬೆಂಬಲವಿದೆ, ಎಲ್ಲಿ ಬೇಕಾದರೂ ಪ್ರತಿಭಟನೆ ಮಾಡಿ ಎಂದಿದ್ದಾರೆ ಎಂದು ಟೀಕಿಸಿದರು.